ಅರ್ಜುನ್ ಜನ್ಯಾ-ಶಿವರಾಜ್ ಕುಮಾರ್ ಸಿನಿಮಾಗೆ ಹೀರೋಯಿನ್ ಹುಡುಕಾಟ

ಶುಕ್ರವಾರ, 24 ಮಾರ್ಚ್ 2023 (11:11 IST)
ಬೆಂಗಳೂರು: ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿರುವ ಶಿವರಾಜ್ ಕುಮಾರ್ ನಾಯಕರಾಗಿರುವ ‘45’ ಸಿನಿಮಾಗೆ ನಾಯಕಿಯ ಹುಡುಕಾಟ ನಡೆದಿದೆ.

ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆಗೆ ರಾಜ್ ಬಿ ಶೆಟ್ಟಿ,ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.  ಈ ಸಿನಿಮಾಗೆ ಈಗ ತಕ್ಕ ಹೀರೋಯಿನ್ ಹುಡುಕಾಟದಲ್ಲಿ ಚಿತ್ರತಂಡವಿದೆ. ಇದಕ್ಕಾಗಿ ಹೊಸಬರಿಗೆ ಅವಕಾಶ ನೀಡಲು ಮುಂದಾಗಿದೆ.

18 ರಿಂದ 28 ವರ್ಷದೊಳಗಿನ ನಟನೆಯಲ್ಲಿ ಆಸಕ್ತಿಯಿರುವ ಕನ್ನಡ ಭಾಷೆ ಬಲ್ಲ ಯುವತಿಯರು ಎಡಿಟ್ ಮಾಡದ, ಯಾವುದೇ ಫಿಲ್ಟರ್ ಅಳವಡಿಸದ ಫೋಟೋಗಳನ್ನು [email protected] ಎಂಬ ಈಮೇಲ್ ವಿಳಾಸಕ್ಕೆ ಕಳುಹಿಸಬಹುದು ಎಂದು ಚಿತ್ರತಂಡ ಪ್ರಕಟಣೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ