ಕಿಚ್ಚ ಸುದೀಪ್ ಗೆ ಸರ್ಪೈಸ್ ಕೊಟ್ಟ ಶಿವರಾಜ್ ಕುಮಾರ್ ದಂಪತಿ

ಶುಕ್ರವಾರ, 3 ಫೆಬ್ರವರಿ 2023 (08:40 IST)
Photo Courtesy: Twitter
ಬೆಂಗಳೂರು: ಇತ್ತೀಚೆಗಷ್ಟೇ ಚಿತ್ರರಂಗದಲ್ಲಿ 27 ವರ್ಷ ಪೂರೈಸಿದ ಸಾಧನೆ ಮಾಡಿದ್ದ ಕಿಚ್ಚ ಸುದೀಪ್ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಸರ್ಪೈಸ್ ಕೊಟ್ಟಿದ್ದಾರೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯಾವಳಿಗಾಗಿ ಕ್ರಿಕೆಟ್ ತಯಾರಿಯಲ್ಲಿ ತೊಡಗಿದ್ದ ಕಿಚ್ಚನಿಗೆ ಶಿವಣ್ಣ ದಂಪತಿ ಸರ್ಪೈಸ್ ಕೊಟ್ಟಿದ್ದಾರೆ. ಕಿಚ್ಚನಿಗಾಗಿ ವಿಶೇಷ ಕೇಕ್ ತರಿಸಿ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ.

ಈ ವೇಳೆ ಗೋಲ್ಡನ್ ಸ್ಟಾರ್ ಗಣೇಶ್, ಸುನಿಲ್ ರಾವ್, ಚಂದನ್ ಕುಮಾರ್ ಸೇರಿದಂತೆ ಸೆಲೆಬ್ರಿಟಿ ಕ್ರಿಕೆಟ್ ಆಡಲಿರುವ ಕಲಾವಿದರು ಜೊತೆ ಸೇರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ