ಮತ್ತೆ ಮೋಡಿ ಮಾಡಲಿದ್ದಾರೆ ಅರ್ಜುನ್ ಜನ್ಯಾ-ಸೋನು ನಿಗಂ
ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದ ಹಾಡಿಗೆ ಜನ್ಯಾ ಸಂಗೀತ ಸಂಯೋಜನೆ ಮಾಡುತ್ತಿದ್ದು, ಇದೀಗ ಸೋನು ಒಂದು ಮೆಲೊಡಿ ಹಾಡಿಗೆ ಧ್ವನಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಿನಿಮಾದಲ್ಲಿ ಬಿಡುಗಡೆಯಾದ ಎರಡೂ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ. ಇತ್ತೀಚೆಗೆ ಗಾಯಕಿ ಮಂಗ್ಲಿ ಇದೇ ಸಿನಿಮಾಗೆ ಎಣ್ಣೆ ಹಾಡೊಂದನ್ನು ಹಾಡಿದ್ದರು. ಈಗ ಮತ್ತೊಂದು ಮೆಲೊಡಿ ಹಾಡಿನ ಧ್ವನಿಮುದ್ರಣವಾಗಿದೆ.