ಪ್ರಜ್ವಲ್ ದೇವರಾಜ್ ನಟನೆಯ ಅರ್ಜುನ ಟ್ರೈಲರ್ ಬಿಡುಗಡೆ

ಗುರುವಾರ, 2 ಜುಲೈ 2015 (11:39 IST)
ಮತ್ತೊಂದು ತಂದೆ ಮಗನ ಕಾಂಬಿನೇಶನ್ ಚಿತ್ರ ಈಗ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗುತ್ತಿದೆ. ಡೈನಮಿಕ್ ಸ್ಟಾರ್ ದೇವರಾಜ್ ಮತ್ತು ಅವರ ಪುತ್ರ ಪ್ರಜ್ವಲ್ ದೇವರಾಜ್ ಅವರ ಅಭಿನಯದ ಚಿತ್ರ ಅರ್ಜುನ್ ಟ್ರೈಲರ್  ಬಿಡುಗಡೆ  ಮಂತ್ರಿ ಮಾಲ್ ನಲ್ಲಿ ಆಯಿತು.  ಗಣೇಶ್ ಅವರು  ತಮ್ಮ ಸಹ ಕಲಾವಿದರ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.   
ರಿಯಲ್ ಲೈಫ್ ನಲ್ಲಿ ತಂದೆ ಮಗನಾಗಿರುವ ದೇವರಾಜ್ ಮತ್ತು ಪ್ರಜ್ವಲ್ ಈ ಚಿತ್ರದಲ್ಲಿ ಭಿನ್ನ ಪಾತ್ರಗಳ ಮೂಲಕ ಜನರ ಮುಂದೆ ಬರುತ್ತಿದ್ದಾರಂತೆ. ಇದನ್ನು ಪಿಸಿ ಶೇಖರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಭಾಮ ಹೀರೋಯಿನ್ ಆಗಿದ್ದಾರೆ. ಸಾಮಾನ್ಯವಾಗಿ ಸೈಲೆಂಟ್ ಆಗಿರುವ ಶೇಖರ್ ಅವರು ಕ್ಯಾಮರ ಎದುರು ಬಂದಾಗ ವಯೋಲೆಂಟ್ ಆಗಿ ಬಿಡ್ತಾರೆ ಎಂದು ತಮ್ಮ ನಿರ್ದೇಶಕರನ್ನು  ಹೊಗಳಿದ್ದಾರೆ ನಟಿ ಭಾಮ. 
 
ನನ್ನ ಮಗನನ್ನು ಹೊಡೆಯುವ ಸನ್ನಿವೇಶದಲ್ಲಿ ಭಾಗವಹಿಸುವಾಗ ನನಗೆ ಬಹಳ ಬೇಸರವಾಯಿತು ಎಂದು ನಟ ದೇವರಾಜ್ ಹೇಳಿದರು ಟ್ರೈಲರ್ ಬಿಡುಗಡೆಯ ಸಮಯದಲ್ಲಿ. ಭಾಮ ಕನ್ನಡದಲ್ಲೇ ಮಾತಾಡಿ ತಾನು ಕನ್ನಡವನ್ನು ಸಹಿತ ಕಲಿಯ ಬಲ್ಲೆ ಎನ್ನುವುದನ್ನು ಅಲ್ಲಿ ನೆರೆದಿದ್ದವರಿಗೆ ತಿಳಿಸಿದರು.
 
ದೇವರಾಜ್ , ಪ್ರಜ್ವಲ್ ದೇವರಾಜ್ ಅಲ್ಲದೆ ನಿರ್ಮಾಪಕ ಕೆ ಮುತ್ತುರಾಜ್ ಅವರು ಸಹ ಈ ಕಾರ್ಯಕ್ರಮದ ಭಾಗವಾಗಿದ್ದರು. ಬೇರೆ ಚಿತ್ರಗಳಿಗಿಂತ ಭಿನ್ನ ಕಥೆಯನ್ನು ಹೊಂದಿದೆ ಎಂದಿರುವ ನಿರ್ದೇಶಕರು ಈ ಚಿತ್ರ ನಿಶ್ಚಿತವಾಗಿ ಜನರನ್ನು ಆಕರ್ಷಿಸುತ್ತದೆ ಎನ್ನುವ ನಂಬುಗೆ ಹೊಂದಿದ್ದಾರೆ. ಅವರ ಆಶಯದಂತೆ ಈ ಚಿತ್ರ ಜನರನ್ನು ತಲುಪಲಿ ಎನ್ನುವ ಹಾರೈಕೆ ನಮ್ಮದು.

ವೆಬ್ದುನಿಯಾವನ್ನು ಓದಿ