ಆರೆಂಜ್ ನನ್ನ ಮನಸ್ಸು ಸೆಳೆದಿತ್ತು.. ಅದು ಸೋತರು ನನ್ನ ಮನ ಗೆದ್ದಿದೆ: ರಾಮಚರಣ್ ತೇಜಾ

ಮಂಗಳವಾರ, 21 ಅಕ್ಟೋಬರ್ 2014 (13:07 IST)
ಟಾಲಿವುಡ್ ನ ಬ್ಲಾಕ್  ಬಸ್ಟರ್ ಸಿನಿಮಾಗಳನ್ನು  ನೀಡುವ ಹೀರೋಗಳಲ್ಲಿ ರಾಮ್ ಚರಣ್ ತೇಜ ಸಹ ಒಬ್ಬರು. ಅವರು ತಮ್ಮ ಕೆರಿಯರ್ ನಲ್ಲಿ ಹೇಳಿಕೊಳ್ಳುವಂತಹ ಗೆಲುವನ್ನು ಪಡೆಯಲಿಲ್ಲ ಆರಂಭಿಕ ಹಂತದಲ್ಲಿ . ಆದರೆ ಅವರ ತಾರ  ಬದುಕಿಗೆ ಒಂದು ತಿರುವು ನೀಡಿದ್ದು ಮಗಧೀರ ಚಿತ್ರ. ರಾಜರ ಕಥೆಯ ಹಾಗು ಜನ್ಮಾಂತರದ ಕಥೆಯನ್ನು ಹೊಂದಿದ್ದ  ಆ ಚಿತ್ರವು ಅಪರೂಪದ ಯಶಸ್ಸು ನೀಡಿತ್ತು. ಅದಾದ ಬಳಿಕ ಆ ಯಶಸ್ಸಿನ ಖುಷಿಯಲ್ಲಿ ಚೆರ್ರಿ ಮತ್ತೊಂದು ಹೊಸ ಸಾಹಸಕ್ಕೆ   ಕೈ ಹಾಕಿದ್ದರು ಆ ಚಿತ್ರದ ಹೆಸರು ಆರೆಂಜ್.
 
ಚೆರ್ರಿಯ ಆರೆಂಜ್ ಬಾಕ್ಸಾಫೀಸನ್ನು ಕೊಳ್ಳೆ ಹೊಡೆದೇ ಹೊಡೆಯುತ್ತದೆ ಎಂದು ನಂಬಲಾಗಿತ್ತು ಆಗ. ಆದರೆ ಎಲ್ಲರು ನಿರೀಕ್ಷಿಸಿದಂತೆ ಆಗದೆ ಉಲ್ಟಾ ಆಗಿದ್ದು ಮಾತ್ರ ವಿಷಾದಕರ. ಸೋತು ಮಕಾಡೆ ಮಲಗಿದೆ  ಚಿತ್ರವು ನಿರ್ಮಾಪಕ ಮತ್ತು ಹಂಚಿಕೆದಾರರ ಭವಿಷ್ಯವನ್ನು ಕಟ್ಟಲು ಮಾಡಿತ್ತು. ಆದರೆ ಈಗ ಗೋವಿಂದುಡು ಅಂದರಿವಾಡಿಲೋ ಚಿತ್ರವು  ಗೆಲುವು ಕಂಡಿದೆ. ಆ ಚಿತ್ರದ ಯಶಸ್ಸು ಚೆರ್ರಿಗೆ ತುಂಬಾ ಖುಷಿ ನೀಡಿದೆ. 
 
ಇತ್ತೀಚಿಗೆ ಆತ ತನ್ನ ಅಭಿಮಾನಿಗಳ ಜೊತೆ ಇಂಟ್ರಾಕ್ಟ್ ಮಾಡಿದ್ದಾರೆ. ಆಗ ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಭಾಗವಾಗಿ ಅವರು ಆರೆಂಜ್ ಚಿತ್ರಕ್ಕೆ ಸಂಬಂಧಪಟ್ಟಂತೆ ಹೇಳಿದ್ದಾರೆ. ತನಗೆ ಅತ್ಯಂತ ಇಷ್ಟವಾದ ಚಿತ್ರ ಅದು. ಅದು ಸೋತರು ಸಹಿತ ನನ್ನ ಮನ ಗೆದ್ದಿದೆ. ತಾನು ಅದೇ ರೇಂಜ್ ಸಿನಿಮಾದಲ್ಲಿ ನಟಿಸುವ ಆಸೆ ಹೊಂದಿದ್ದೇನೆ ಎಂದು ಹೇಳಿದ್ದಾರೆ. 
 
ಮಗಧೀರ ನಂತರ  ಆರೆಂಜ್ ಬಿಡುಗಡೆ ಆಗಿತ್ತು. ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದ ಈ ಚಿತ್ರವನ್ನು ಬೊಮ್ಮರಿಲ್ಲು ಭಾಸ್ಕರ್ ಅವರು ನಿರ್ದೇಶನ ಮಾಡಿದ್ದರು. ಚೆರ್ರಿ ಜೊತೆ ಜೆನಿಲಿಯ ದೇಶ್ ಮುಖ್  ನಟಿಸಿದ್ದರು. ಆದರೆ ಅದು ಕೆಟ್ಟದಾಗಿ ಸೋತು ಹೈರಾಣಾಯಿತು. ಆದರೆ ಈಗ ಗೋವಿಂದ ಚೆರ್ರಿಯನ್ನು ಗೆಲ್ಲಿಸಿ   ಮತ್ತೆ ಆರೆಂಜ್ ನಂತಹ ಚಿತ್ರ ಮಾಡಲು ಆಸೆ ಹುಟ್ಟಿಸಿದ್ದಾನೆ. ಆದರೆ ಈ ಬಾರಿ ಆರೆಂಜ್ ನಂತಹ ಸಬ್ಜೆಕ್ಟ್ ಹೊಂದಿರುವ ಚಿತ್ರದಲ್ಲಿ ಕಮರ್ಷಿಯಲ್ ಎಲಿಮೆಂಟ್ಸ್ ಗೆ ತುಂಬಾ ಆದ್ಯತೆ ನೀಡುವುದಾಗಿ ಹೇಳಿದ್ದಾರೆ ರಾಮ್ ಚರಣ್.
 

ವೆಬ್ದುನಿಯಾವನ್ನು ಓದಿ