ನಟಿ ರಿಯಾ ಚಕ್ರವರ್ತಿ ಸಹೋದರ ಅರೆಸ್ಟ್ : ಬಾಲಿವುಡ್ ನಟ ಹೇಳಿದ್ದೇನು?

ಶನಿವಾರ, 5 ಸೆಪ್ಟಂಬರ್ 2020 (15:15 IST)
ನಟಿ ರಿಯಾ ಚಕ್ರವರ್ತಿಯ ಸಹೋದರ ಹಾಗೂ ಸುಶಾಂತ್ ಸಿಂಗ್ ಮನೆ ಮ್ಯಾನೇಜರ್ ಬಂಧನವಾಗಿರುವ ಕುರಿತು ಬಾಲಿವುಡ್ ನಟ ಶೇಖರ್ ಸುಮನ್ ಪ್ರತಿಕ್ರಿಯೆ ನೀಡಿದ್ದಾರೆ.

ಶೋಯಿಕ್ ಚಕ್ರವರ್ತಿ ಮತ್ತು ಸ್ಯಾಮ್ಯುಯೆಲ್ ಮಿರಾಂಡಾ ಬಂಧನಕ್ಕೆ ಶೇಖರ್ ಸುಮನ್ ಪ್ರತಿಕ್ರಿಯಿಸಿದ್ದು, "ಸಣ್ಣ ಮೀನುಗಳು ಹಿಡಿಯಲ್ಪಟ್ಟಿದೆ, ಈಗ ದೊಡ್ಡ ಶಾರ್ಕ್ ಗಳ ಸಮಯ" ಎಂದು ಬರೆದುಕೊಂಡಿದ್ದಾರೆ.

ನಟಿ ರಿಯಾ ಚಕ್ರವರ್ತಿಯ ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಮನೆ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿದೆ.

ನಟ ಶೇಖರ್ ಸುಮನ್ ಟ್ವಿಟ್ ಮಾಡಿದ್ದು, "ಯಶಸ್ಸಿನ ಮೊದಲ ಹೆಜ್ಜೆ. ನಿಮ್ಮೆಲ್ಲರಿಗೂ ಅಭಿನಂದನೆಗಳು. ಸಣ್ಣ ಮೀನುಗಳು ಸಿಕ್ಕಿಬಿದ್ದಿವೆ. ಈಗ ದೊಡ್ಡ ಶಾರ್ಕ್‌ಗಳಿಗೆ ಸಮಯ. ಅವರು ಶೀಘ್ರದಲ್ಲೇ ಸಿಕ್ಕಿಹಾಕಿಕೊಳ್ಳುತ್ತಾರೆಂದು ನಾನು ಭಾವಿಸುತ್ತೇನೆ. ಉದ್ಯಮವನ್ನು ಸ್ವಚ್ಛಗೊಳಿಸಲಾಗಿದೆ. ಕೋಕಸ್ ಅನ್ನು ಬಸ್ಟ್ ಮಾಡಲಾಗಿದೆ. ಕಿಂಗ್‌ಪಿನ್‌ಗಳನ್ನು ಬಂಧಿಸಲಾಗಿದೆ. " ಎಂದು ಬರೆದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ