ಅರುಣ್ ಸಾಗರ್ ’ಕಲಾ’ ನಿರ್ದೇಶನದಲ್ಲಿ ಯಶ್-ರಾಧಿಕಾ ಸಪ್ತಪದಿ

ಗುರುವಾರ, 1 ಡಿಸೆಂಬರ್ 2016 (07:47 IST)
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮದುವೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಭಾವಿ ದಂಪತಿಗಳು ಈಗಾಗಲೆ ಗೆಳೆಯರು, ಹಿತೈಷಿಗಳು, ಬಂಧು ಬಳಗವನ್ನ ಮದುವೆಗೆ ಆಮಂತ್ರಿಸುತ್ತಿದ್ದಾರೆ. ಮದುವೆ ಮಂಟಪ, ಮುಹೂರ್ತ, ಆರತಕ್ಷತೆ ಸಮಾರಂಭದ ಜವಾಬ್ದಾರಿಯನ್ನ ಅರುಣ್ ಸಾಗರ್ ಅವರಿಗೆ ಒಪ್ಪಿಸಲಾಗಿದೆ. 
 
ಅರುಣ್ ಸಾಗರ್ ಅವರ ನೇತೃತ್ವದಲ್ಲಿ ಮಂಟಪದ ವಿನ್ಯಾಸ ಕಾರ್ಯ ನಡೆಯುತ್ತಿದೆ. ಇದಕ್ಕೆ 60-70 ಜನರ ತಂಡ ಕೆಲಸ ಮಾಡುತ್ತಿದ್ದು, ಮಂಟಪವನ್ನ ದೇವಾಲಯದ ತರಹ ವಿನ್ಯಾಸ ಮಾಡಲಾಗುತ್ತಿದೆ. ಬೇಳೂರು ಮತ್ತು ಹಳೆಬೀಡಿನ ಹೊಯ್ಸಳ ಶಿಲ್ಪಕಲೆಯನ್ನ ಮದುವೆ ಮಂಟಪ ಪ್ರತಿನಿಧಿಸಲಿದೆಯಂತೆ. 
 
ಆರತಕ್ಷತೆ ವೇದಿಕೆಯನ್ನೂ ಅದ್ದೂರಿಯಾಗಿ ನಿರ್ಮಿಸಲಾಗುತ್ತಿದೆ. ಅರುಣ್ ಅವರ ಸಲಹೆಯಂತೆ ಧ್ರುವ ಕುಮಾರ್, ಚಂದ್ರು, ಉಡುಪ ಮತ್ತು ಸೋಮಯ್ಯ ಇದಕ್ಕಾಗಿ ಹೂಗಳ ವಿನ್ಯಾಸ ಮಾಡುತ್ತಿದ್ದಾರೆ. ಡಿಸೆಂಬರ್ 9 ನೆಯ ತಾರೀಖು ಆರತಕ್ಷತೆ ಕಾರ್ಯಕ್ರಮ. ಇದು ಎರಡು ದಿನಗಳ ಕಾಲ ನಡೆಯಲಿದೆ. ತಾರೆಯರು, ಗೆಳೆಯರು ಹಾಗು ಕುಂಟುಬ ವರ್ಗಕ್ಕೆ ಡಿಸೆಂಬರ್ 10 ಕ್ಕೆ ಆಹ್ವಾನಿಸಿದ್ದರೆ, ಡಿಸೆಂಬರ್ 11 ಕ್ಕೆ ಅಭಿಮಾನಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ