ಚೇಸ್‌ನಲ್ಲಿದೆ ಅರವಿಂದ ಬೋಳಾರ್ ಕಾಮಿಡಿ ಕಚಗುಳಿ!

ಸೋಮವಾರ, 16 ಡಿಸೆಂಬರ್ 2019 (13:42 IST)
ಅಖಂಡ ಎರಡು ವರ್ಷಗಳ ಕಾಲ ನಿರಂತರವಾದಶ್ರದ್ಧೆ, ಪರಿಶ್ರಮಗಳಿಂದ ರೂಪುಗೊಂಡಿರುವ ಚಿತ್ರ ಚೇಸ್‌. ಹೀಗೆ ಎರಡು ವರ್ಷಗಳ ಕಾಲ ತೆಗೆದುಕೊಂಡರೂ ಸಹ ಆ ಅವಧಿಯ ತುಂಬೆಲ್ಲ ಈ ಸಿನಿಮಾ ಕುತೂಹಲವನ್ನು ಸದಾಚಾಲ್ತಿಯಲ್ಲಿಟ್ಟುಕೊಂಡೇ ಸಾಗಿ ಬಂದಿತ್ತು. 
ಅದು ಅದರ ಕಂಟೆಂಟಿನ ತಾಕತ್ತೆಂದರೂ ಅತಿಶಯವಲ್ಲ. ಹೀಗೆ ಸಾಗಿ ಬಂದಿದ್ದ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.ಅದರಲ್ಲಿ ಕಾಣಿಸಿದ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥೆಯ ಝಲಕ್ಕುಗಳನ್ನು ಕಂಡುಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಈ ಮೂಲಕವೇ ಚೇಸ್‌ನಲ್ಲಿರೋ ಪಾತ್ರ ಪರಿಚಯವೂಆಗಿದೆ. ಇದೀಗ ತುಳು ಚಿತ್ರರಂಗದ ಖ್ಯಾತ ಕಾಮಿಡಿ ನಟ ಅರವಿಂದ ಬೋಳಾರ್ ನಟಿಸಿರೋಪಾತ್ರವೊಂದರ ಬಗ್ಗೆ ಕೆಲವಾರು ಕುತೂಹಲಕರವಾದ ಮಾಹಿತಿಗಳನ್ನು ಚಿತ್ರತಂಡ ಜಾಹೀರುಮಾಡಿದೆ.
ಅರವಿಂದ ಬೋಳಾರ್ ತುಳುನಾಡ ಮಾಣಿಕ್ಯ ಎಂದೇಹೆಸರಾಗಿರುವ ಹಾಸ್ಯ ನಟ. ತುಳುನಾಡಿನ ತುಂಬೆಲ್ಲ ಈ ಹೆಸರು ಕೇಳಿದರೇನೇ ನಗೆಯಹೊನಲು ಹರಿಯುವಷ್ಟರ ಮಟ್ಟಿಗೆ ಪ್ರಸಿದ್ಧರಾದವರು ಬೋಳಾರ್. ಅವರು ಚೇಸ್‌ ಚಿತ್ರದಮೂಲಕ ಕನ್ನಡ ಪ್ರೇಕ್ಷಕರಿಗೂ ನಿರ್ಣಾಯಕವಾಗಿಯೇ ತಲುಪಿಕೊಳ್ಳುವಂಥಾ ಪಾತ್ರವನ್ನು ನಿರ್ವಹಿಸಿದ್ದಾರಂತೆ.ರೋಬೋ 2.0 ಚಿತ್ರದಲ್ಲಿ ಅಕ್ಷಯ್ ಕುಮಾರ್ ಮಾಡಿದ್ದ ಪಕ್ಷಿರಾಜನ ಪಾತ್ರವನ್ನೇಹೋಲುವಂಥಾ ಗೆಟಪ್ಪಿನಲ್ಲಿ ಬೋಳಾರ್ ಮಿಂಚಿದ್ದಾರಂತೆ. 
ಅವರು ಬಾಡಿ ಲ್ಯಾಂಗ್ವೇಜ್ ಮೂಲಕವೇ ನಗೆಯುಕ್ಕಿಸುವಂಥಾ ಚಾತಿ ಹೊಂದಿರುವ ನಟ. ಈ ಚಿತ್ರೀಕರಣದ ವೇಳೆಯಲ್ಲಿ ನಗುವನ್ನುಹತೋಟಿಯಲ್ಲಿಟ್ಟುಕೊಂಡು ಚಿತ್ರೀಕರಣದಲ್ಲಿ ಭಾಗಿಯಾಗಲು ಸಹ ಕಲಾವಿದರು ಹರಸಾಹಸಪಡುವಂತಾಗಿತ್ತಂತೆ. ಅದು ಬೋಳಾರ್ ಕಾಮಿಡಿ ಝಲಕ್ ಅದೆಷ್ಟು ಪರಿಣಾಮಕಾರಿಯಾಗಿದೆಎಂಬುದನ್ನು ಸಾರಿ ಹೇಳುವಂತಿದೆ.ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಜಾನರಿನ ಚೇಸ್‌ ಚಿತ್ರದಲ್ಲಿ ಅವಿನಾಶ್ ನರಸಿಂಹರಾಜು, ರಾಧಿಕಾ ನಾರಾಯಣ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ,ಸುಶಾಂತ್ ಶೆಟ್ಟಿ, ಅರವಿಂದ್ ರಾವ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ವೀಣಾ ಸುಂದರ್,ಉಷಾ ಭಂಡಾರಿ, ಸುಂದರ್ ಮುಂತಾದವರ ತಾರಗಣವಿದೆ. ರೆಹಮಾನ್ ಹಾಸನ್ ಇನ್ನೊಂದುಮುಖ್ಯ ಪಾತ್ರದಲ್ಲಿದ್ದಾರೆ. 
ಸಿಂಪ್ಲಿಫನ್ ಮೀಡಿಯಾ ನೆಟ್ವರ್ಕ್ ಪ್ರೈ ಲಿಮಿಟೆಡ್ ಬ್ಯಾನರ್ನಲ್ಲಿಅಡಿಯಲ್ಲಿ ಚೇಸ್ ಚಿತ್ರ ನಿರ್ಮಾಣಗೊಂಡಿದೆ. ಮಂಗಳೂರಿನವರೇ ಆದ ಮನೋಹರ್ ಸುವರ್ಣ,ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರಾಗಿ, ಶಿವ್ ಶೆಟ್ಟಿ ಕಾರ್ಯಕಾರಿನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡಿರೋ ಚೇಸ್‌ ಇದೀಗ ಬಿಡುಗಡೆಯ ಹಾದಿಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ