ನಟಿ ನಯನತಾರಾ ಈ ಸ್ಟಾರ್ ನಟನ ಜೊತೆ ನಟಿಸುವುದನ್ನು ಹಲವು ಬಾರಿ ತಿರಸ್ಕರಿಸಿದ್ದಾರಂತೆ

ಸೋಮವಾರ, 21 ಡಿಸೆಂಬರ್ 2020 (10:27 IST)
ಚೆನ್ನೈ : ನಟಿ ನಯನತಾರಾ ತಮಿಳು, ತೆಲುಗು ಮತ್ತು ಮಲಯಾಳಂನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಅವರ ನೇಟ್ರಿಕನ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.  ಇದೀಗ ಅವರು ಶ್ಯಾಡೋ ಮತ್ತು ಗಾರ್ಡಿಯನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಟಿ ನಯನತಾರಾ ಚಿತ್ರರಂಗದ ಹಲವು ನಾಯಕರ ಜೊತೆ ನಟಿಸಿದ್ದಾರೆ. ಆದರೆ ವಿಶ್ವ ನಾಯಕರೆಂದೇ ಪ್ರಸಿದ್ಧರಾದ ಕಮಲ್ ಹಾಸನ್ ಜೊತೆ ನಟಿಸಿಲ್ಲ. ಅಲ್ಲದೇ ನಟಿ ನಯನತಾರಾ ಕಮಲ್ ಹಾಸನ್ ಜೊತೆ ನಟಿಸುವ ಅವಕಾಶವನ್ನು ಹಲವು ಬಾರಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಕಮಲ್ ಹಾಸನ್ ಜೊತೆ ಅನ್ಯೋನ್ಯತೆ ಹಾಗೂ ಚುಂಬನ ದೃಶ್ಯಗಳಲ್ಲಿ ನಟಿಸುವುದನ್ನು ತಪ್ಪಿಸಲು ಈ ರೀತಿ ಮಾಡಿದ್ದಾರೆಯೇ ಎಂಬ ಪ್ರಶ್ನೆ ಕಾಲಿವುಡ್ ನಲ್ಲಿ ಕೇಳಿಬಂದಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ