ಅಕ್ಟೋಪಸ್ ಸಿನಿಮಾದ ಆಡಿಯೋ ಹಾಗೂ ಟ್ರೇಲರ್ ರಿಲೀಸ್

ಸೋಮವಾರ, 31 ಆಗಸ್ಟ್ 2015 (11:32 IST)
ಉಳಿದವರ ಕಂಡಂತೆ, ವಾಸ್ಕೋಡಿಗಾಮಾ ಸಿನಿಮಾದ ನಂತರ ಕಿಶೋರ್ ಹಾಗೂ ಯಜ್ಞಾ ಶೆಟ್ಟಿ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಅಂದ್ರೆ ಅದು ವಾಸ್ಕೋಡಿಗಾಮಾ. ಇತ್ತೀಚೆಗೆ ಈ ಸಿನಿಮಾದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆಗೊಂಡಿತು.

ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನಾಧರಿಸಿದ ಸಿನಿಮಾ ಇದಾಗಿದ್ದು, ಮತ್ತೆ ಈ ಸಿನಿಮಾದ ಮೂಲಕ ಕಿಶೋರ್ ಹಾಗೂ ಯಜ್ಞಾ ಶೆಟ್ಟಿ ಜೊತೆಯಾಗಿದ್ದಾರೆ. ಇತ್ತೀಚೆಗೆ ಸಿನಿಮಾದ ಟ್ರೇಲರ್ ಹಾಗೂ ಸಿನಿಮಾದ ಆಡಿಯೋವನ್ನು ನಟ ಪುನೀತ್ ರಾಜ್ ಕುಮಾರ್ ಬಿಡುಗಡೆಗೊಳಿಸಿದ್ರು.
 
ಸಿನಿಮಾವನ್ನು ಅಣ್ಣಯ್ಯ ಎಂಬವರು ನಿರ್ದೇಶಿಸಿದ್ದು, ಪ್ರಸನ್ನಕುಮಾರ್ ಎಂಬವರು ನಿರ್ಮಿಸಿದ್ದಾರೆ. ರಿಶಾಲ್ ಸಾಯಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದಲ್ಲಿ ತಾರಾ, ಶರತ್ ಲೋಹಿತಾಶ್ವ, ಅಶ್ವಿನಿ ಮುಂತಾದವರು ಅಭಿನಯಿಸಿದ್ದು, ಮುಂದಿನ ತಿಂಗಳು ಸಿನಿಮಾ ರಿಲೀಸ್ ಆಗಲಿದೆ.

ವೆಬ್ದುನಿಯಾವನ್ನು ಓದಿ