ಶಂಕರ್ ನಾಗ್ ಗೆ ಅರವತ್ತರ ಹುಟ್ಟು ಹಬ್ಬ ... ಭಾರಿ ಗಾತ್ರದ ಕೇಕ್ ಕತ್ತರಿಸಿ ಸಂಭ್ರಮಿಸಿದ ಆಟೋ ಚಾಲಕರು

ಮಂಗಳವಾರ, 11 ನವೆಂಬರ್ 2014 (11:07 IST)
ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗದ ಮರೆಯದ ಮಾಣಿಕ್ಯ ಶಂಕರ್ ನಾಗ್. ನವೆಂಬರ್ 9  ರಂದು ಅವರ  60 ನೇ ಜಯಂತಿ ಅದ್ಧೂರಿಯಿಂದ ನಡೆಯಿತು. ಶಂಕರ್ ನಾಗ್  ಅವರು ಆಟೋ ಚಾಲಕರ ಅತಿಮೆಚ್ಚಿನ ಹೀರೋ. ಈ ಚಿತ್ರಕಲಾವಿದ ಕಿರಿಯ ವಯಸ್ಸಿನಲ್ಲೇ ದುರಂತ ಅಂತಿಮ ಕಂಡರೂ ಎಂದಿಗೂ ಅವರ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿ ಆಗಿದ್ದಾರೆ. ಅವರ ಹೆಸರಿನ ರಂಗ ಶಂಕರ ಕಲಾಮಂದಿರಕ್ಕೆ ಈಗ ಹತ್ತು ವರ್ಷಗಳ ಸಂಭ್ರಮ. 

ಭಾನುವಾರ ನಡೆದ ಜಯಂತಿಯಂದು 300  ಆಟೋ ಚಾಲಕರು ಬೆಂಗಳೂರಿನಲ್ಲಿ  ಭಾರಿ ಗಾತ್ರದ ಕೇಕ್ ಕತ್ತರಿಸಿ ಶಂಕರ್ ಸಿನಿಮಾದ ಹಾಡುಗಳನ್ನು ಹಾಡಿ ತಮ್ಮ ಪ್ರೀತಿಯ ಅರ್ಪಣೆ ಮಾಡಿದರು. 
 
ಈ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಶರಣ್ ಸಹ ಭಾಗವಹಿಸಿದ್ದರು. ಶಂಕರ್ ನಾಗ್ ಆಟೋವನ್ನು ಡ್ರೈವ್ ಮಾಡಿ ತಮ್ಮ ವಿಶೇಷತೆ ತೋರಿದರು. ನಿರ್ದೇಶಕ ಓಂ  ಸಾಯಿಪ್ರಕಾಶ್ . ಗೀತರಚನೆಕಾರ ಡಾ. ವಿ ನಾಗೇಂದ್ರ ಪ್ರಸಾದ್ ಮುಂತಾದವರು ಭಾಗವಹಿಸಿದ್ದರು. 

ವೆಬ್ದುನಿಯಾವನ್ನು ಓದಿ