ಹೌದು... ರಂಗಿತರಂಗ ಸಿನಿಮಾದಲ್ಲಿ ತನ್ನದಲ್ಲ ತಪ್ಪಿಗೆ ನಾಯಕನ ಪ್ರೀತಿಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಮುದ್ದು ಹುಡುಗಿಯಾಗಿ ಕಾಣಿಸಿಕೊಂಡಿದ್ದ ಅವಂತಿಕಾ ಶೆಟ್ಟಿ ಅವರನ್ನು ಮತ್ತೆ ಯಾವ ಸಿನಿಮಾದಲ್ಲಿ ನೋಡುತ್ತೇವೆ ಅಂತಾ ಅಭಿಮಾನಿಗಳನ್ನು ಕಾಯುತ್ತಿದ್ದರು. ಇದೀಗ ಅವರ ಕಾಯುವಿಕೆಗೂ ಒಂದು ಅರ್ಥ ನೀಡಿದ್ದಾರೆ ಅನೂಪ್. ತಮ್ಮ ಮುಂದಿನ ಸಿನಿಮಾದಲ್ಲೂ ಅವಂತಿಕಾ ಶೆಟ್ಟಿ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.ಇನ್ನು ನಿರೂಪ್ ಅವರು ತಮ್ಮ ಮುಂದಿನ ಸಿನಿಮಾದಲ್ಲೂ ನಾಯಕನಾಗಿ ಇರುತ್ತಾರೆ ಅಂತಾ ಅನೂಪ್ ಈ ಹಿಂದೆಯೇ ಹೇಳಿದ್ದರು.