77ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ: ಇತಿಹಾಸ ಸೃಷ್ಟಿಸಿದ ಅನುಸೂಯಾ

sampriya

ಶನಿವಾರ, 25 ಮೇ 2024 (15:23 IST)
Photo By X
ಮುಂಬೈ: 77ನೇ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಅನುಸೂಯಾ ಸೆನ್‌ಗುಪ್ತಾ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಪ್ರತಿಷ್ಠಿತ  ಚಲನಚಿತ್ರೋತ್ಸವದಲ್ಲಿ ಭಾರತ ಇತಿಹಾಸ ನಿರ್ಮಿಸಿದೆ.

ಶೇಮ್‌ಲೆಸ್‌ ಚಿತ್ರದಲ್ಲಿನ ನಟನೆಗಾಗಿ  ಅನುಸೂಯಾ ಅವರಿಗೆ ಈ ಪ್ರಶಸ್ತಿ ಒಲಿದಿದೆ.  ಬಲ್ಗೇರಿಯಾದ ಚಲನಚಿತ್ರ ನಿರ್ಮಾಪಕ ಕಾನ್‌ಸ್ಟಾಂಟಿನ್ ಬೊಜಾನೋವ್ ನಿರ್ದೇಶಿಸಿದ 'ಶೇಮ್‌ಲೆಸ್' ಚಿತ್ರದಲ್ಲಿ ಅನಸೂಯಾ ಲೈಂಗಿಕ ಕಾರ್ಯಕರ್ತೆಯ ಪಾತ್ರವನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ್ದರು.  

ಕೋಲ್ಕತ್ತಾದ ಅನಸೂಯಾ ಸೇನ್‌ಗುಪ್ತಾ ಅವರು ಅನ್ ಸರ್ಟೈನ್ ರಿಗಾರ್ಡ್ ವಿಭಾಗದಲ್ಲಿ  ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಶಸ್ತಿಯನ್ನು ಪಡೆದ ಬಳಿಕ ಈ ಪ್ರಶಸ್ತಿಯನ್ನು ಅವರು ಸಲಿಂಗಕಾಮಿ ಸಮುದಾಯ ಮತ್ತು ಪ್ರಪಂಚದಾದ್ಯಂತ ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ಶೌರ್ಯಕ್ಕೆ ಅರ್ಪಿಸಿದ್ದಾರೆ.

ಇದೇ ಚಿತ್ರೋತ್ಸವದಲ್ಲಿ ಕನ್ನಡಿಗ ನಿರ್ದೇಶಕ ಚಿದಾನಂದ್‌ ನಾಯ್‌ ಅವರ ಕಿರು ಚಿತ್ರಕ್ಕೂ ಪ್ರಶಸ್ತಿ ಸಂದಿದೆ. ಸನ್‌ಫ್ಲವರ್‌ ವೇರ್‌ ದಿ ಫಸ್ಟ್‌ ವನ್ಸ್ ಟು ನೋ ಎಂಬ ಕನ್ನಡ ಶಾರ್ಟ್‌ ಫಿಲ್ಸ್‌ ಹಾಗೂ ಬನ್ನಿಹುಡ್' ಕೂಡ 'ಲಾ ಸಿನೆಫ್ ಸೆಲೆಕ್ಷನ್' ನಲ್ಲಿ ಮೊದಲ ಮತ್ತು ಮೂರನೇ ಸ್ಥಾನವನ್ನು ಗೆದ್ದಿವೆ.

ಈ ಬಾರಿ ಕೇನ್ಸ್‌ ಚಿತ್ರೋತ್ಸವ ಭಾರತೀಯರ ಪಾಲಿಗೆ ವಿಶೇವಾಗಿದೆ. ಈ ಚಿತ್ರೋತ್ಸವದಲ್ಲಿ ಶ್ಯಾಮ್ ಬೆನಗಲ್ ಅವರ 'ಮಂಥನ್' ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಇನ್ನು ಮೀರತ್‌ನ ಮಾನ್ಸಿ ಮಹೇಶ್ವರಿ ಮತ್ತು ಎಫ್‌ಟಿಐಐ ವಿದ್ಯಾರ್ಥಿಗಳ ಚಿತ್ರಗಳು ಸಹ ಇದಕ್ಕೂ ಮೊದಲು ಕೇನ್ಸ್ ಪ್ರಶಸ್ತಿ ಪಡೆದಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ