ಬಿ ಸರೋಜಾದೇವಿ ಕೊನೆಯ ಕ್ಷಣದಲ್ಲಿ ಏನಾಯ್ತು ಇಲ್ಲಿದೆ ವಿವರ

Krishnaveni K

ಸೋಮವಾರ, 14 ಜುಲೈ 2025 (14:03 IST)
Photo Credit: X
ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟಿ ಬಿ ಸರೋಜಾದೇವಿ ಇಂದು ನಮ್ಮನ್ನಗಲಿದ್ದಾರೆ. ಅವರಿಗೆ 87 ವರ್ಷ  ವಯಸ್ಸಾಗಿತ್ತು. ಅವರಿಗೆ ಕೊನೆಯ ಕ್ಷಣದಲ್ಲಿ ಏನಾಯ್ತು ಇಲ್ಲಿದೆ ವಿವರ.

ಬಿ ಸರೋಜದೇವಿ ಕನ್ನಡದ ಎವರ್ ಗ್ರೀನ್ ನಟಿ. ಅಭಿನಯ ಸರಸ್ವತಿ ಎಂಬ ಕಲಾಬಿರುದು ಹೊಂದಿದ್ದ ನಟಿ. ಪೌರಾಣಿಕ, ಐತಿಹಾಸಿಕ ಸಿನಿಮಾಗಳಲ್ಲಂತೂ ಅವರ ಅಭಿನಯಕ್ಕೆ ಸರಿಸಾಟಿಯೇ ಇಲ್ಲ ಎಂಬಂತಿತ್ತು.  

ಇದೀಗ ಅವರು ವಯೋಸಹಜ ಕಾಯಿಲೆಗಳಿಂದಾಗಿ ಮೃತಪಟ್ಟಿದ್ದಾರೆ. ಅಷ್ಟಕ್ಕೂ ಬಿ ಸರೋಜಾದೇವಿಗೆ ಕೊನೆಯ ಕ್ಷಣದಲ್ಲಿ ಆಗಿದ್ದೇನು ಎಂಬ ಕುತೂಹಲ ಎಲ್ಲರಲ್ಲಿದೆ. ಬಿ ಸರೋಜಾದೇವಿ ತಮ್ಮ ಜೀವನದ ಕೊನೆಯ ಕ್ಷಣದವರೆಗೂ ತಮ್ಮ ದೈನಂದಿನ ಕೆಲಸಗಳಲ್ಲಿ ಕೊಂಚವೂ ವ್ಯತ್ಯಾಸವಾಗದಂತೆ ನೋಡಿಕೊಂಡಿದ್ದರು.

ಪ್ರತಿನಿತ್ಯ ಅವರು ಬೆಳಿಗ್ಗೆಯೇ ಸ್ನಾನ ಮಾಡಿ ಪೂಜೆ ಮುಗಿಸಿದ ನಂತರವೇ ತಿಂಡಿ ತಿನ್ನುತ್ತಿದ್ದರು. ಇಂದೂ ಬೆಳಿಗ್ಗೆ 9 ಗಂಟೆ ಸುಮಾರಿಗೆ ಅದೇ ರೀತಿ ಸ್ನಾನ, ಪೂಜೆ ಮುಗಿಸಿ ಟಿವಿ ಅನ್ ಮಾಡಿದ್ದರು. ಆದರೆ ಅಷ್ಟರಲ್ಲಿ ಅವರು ತೀರಾ ಸುಸ್ತಾದವರಂತೆ ಕುಸಿದು ಕುಳಿತರು.

ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಇಂದು ಇಡೀ ದಿನ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಮೃತದೇಹವನ್ನು ಇಡಲಾಗುತ್ತದೆ. ನಾಳೆ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ