ಹಿಂದೂ ದೇವರ ಮೇಲೆ ಉಚ್ಚೆ, ಕಕ್ಕ ಮಾಡ್ತೀನಿ ಎಂದವನ ಸ್ನೇಹ ಬೇಕಾ: ಯೋಗರಾಜ್ ಭಟ್ ಟ್ರೋಲ್

Krishnaveni K

ಸೋಮವಾರ, 14 ಜುಲೈ 2025 (12:11 IST)
ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಅವರ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಅನುರಾಗ್ ಕಶ್ಯಪ್ ಇತ್ತೀಚೆಗಿನ ಕೆಲವು ಸಮಯದಲ್ಲಿ ಮಾಡಿರುವ ವಿವಾದಗಳ ಸರಮಾಲೆ ಎಲ್ಲರಿಗೂ ಗೊತ್ತಿರುವಂತದ್ದೇ. ಅವರ ಕೆಲವೊಂದು ಹೇಳಿಕೆಗಳು ಹಿಂದೂಗಳನ್ನೂ ಕೆರಳಿಸಿತ್ತು. ಕೆಲವು ದಿನಗಳ ಹಿಂದಷ್ಟೇ ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೇನೆ ಏನಿವಾಗ ಎಂದಿದ್ದರು. ಹಿಂದೂಗಳನ್ನು ಅವಹಳೇನ ಮಾಡಿದ್ದರು.

ಇದೀಗ ಅದೇ ನಿರ್ದೇಶಕನ ಜೊತೆ ಯೋಗರಾಜ್ ಭಟ್ ಕೈ ಜೋಡಿಸಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅನುರಾಗ್ ಕಶ್ಯಪ್ ಜೊತೆಗಿನ ಫೋಟೋ ಪ್ರಕಟಿಸಿ ಭಟ್ಟರು ತಮ್ಮದೇ ಶೈಲಿಯಲ್ಲಿ ಒಟ್ಟಿಗೆ ಕೆಲಸ ಮಾಡಲಿರುವುದಾಗಿ ಘೋಷಿಸಿದ್ದಾರೆ.

ಆದರೆ ಇದಕ್ಕೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಹಿಂದೂ ದೇವರ ಮೇಲೆ, ಬ್ರಾಹ್ಮಣರ ಮೇಲೆ ಕಕ್ಕ, ಮೂತ್ರ ಮಾಡ್ತೀನಿ ಎಂದವನ ಜೊತೆ ಸಿನಿಮಾ ಮಾಡಬೇಕಾ? ಒಬ್ಬ ಯೋಗ್ಯನ ಜೊತೆ ಇನ್ನೊಬ್ಬ ಅಯೋಗ್ಯ ಸರಿಯಾಗಿದೆ ಜೋಡಿ ಎಂದು ಕಿಡಿ ಕಾರಿದ್ದಾರೆ. ಇನ್ನು ಕೆಲವರು ಭಟ್ರೇ ನಿಮಗೆ ಬೇರೆ ಯಾರೂ ಸಿಗಲಿಲ್ವಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ