ಏಪ್ರಿಲ್ ನಲ್ಲಿ ಬಾದ್ ಷಾ ಸಿನಿಮಾದ ಮುಹೂರ್ತ

ಸೋಮವಾರ, 8 ಫೆಬ್ರವರಿ 2016 (11:27 IST)
ಈ ವರ್ಷ ನಿರ್ದೇಶಕ ಚಂದ್ರು ಫುಲ್ ಬ್ಯುಸಿಯಾಗಿದ್ದಾರೆ. ಚಂದ್ರು ಕೈ ತುಂಬಾ ಅನೇಕ ಸಿನಿಮಾಗಳಿವೆ. ಒಂದು ಕಡೆ ಲಕ್ಷ್ಮಣ ಸಿನಿಮಾ ರಿಲೀಸ್ ಗೆ ರೆಡಿಯಾಗುತ್ತಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಚಂದ್ರು ಮತ್ತೊಂದು ಮೆಗಾ ಪ್ರಾಜೆಕ್ಟ್ ಗೆ ಕೈ ಹಾಕುತ್ತಿದ್ದಾರೆ.

ಈ ಹಿಂದೆ ಚಂದ್ರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮೈಲಾರಿ ಸಿನಿಮಾವನ್ನು ನಿರ್ದಶಿಸಿದ್ದರು. ಇದೀಗ ಮತ್ತೆ ಚಂದ್ರು ಶಿವಣ್ಣ ಅವರಿಗೆ ಆಕ್ಷನ್ ಕಟ್ ಹೇಳೋದಕ್ಕೆ ರೆಡಿಯಾಗಿದ್ದಾರೆ.ಅದು ಬಾದ್ ಷಾ ಸಿನಿಮಾದ ಮೂಲಕ. ಶಿವಣ್ಣ ಹಾಗೂ ಚಂದ್ರು ಕಾಂಬಿನೇಷನ್ ನಲ್ಲಿ ಬರ್ತಿರೋ ಎರಡನೇ ಸಿನಿಮಾ ಬಾದ್ ಷಾ. ಈ ಹಿಂದೆ ಮೈಲಾರಿ ಸಿನಿಮಾ ಮಾಡಿದ್ದ ಚಂದ್ರು ಇದೀಗ ಶಿವಣ್ಣನ್ನು ಬಾದ್ ಷಾ ಮಾಡುತ್ತಿದ್ದಾರೆ. ಈ ಸಿನಿಮಾ ಕೂಡ ಶೀಘ್ರದಲ್ಲೇ ಸೆಟ್ಟೇರುತ್ತಿದೆ.
 
ಏಪ್ರೀಲ್ ನಲ್ಲಿ ಬಾದ್ ಷಾ ಸಿನಿಮಾದ ಮುಹೂರ್ತ ನಡೆಯಲಿದೆಯಂತೆ. ಅಂದ್ಹಾಗೆ ಮೈಲಾರಿ ಸಿನಿಮಾ ಕೂಡ ಏಪ್ರಿಲ್ ತಿಂಗಳಲ್ಲೇ ಸೆಟ್ಟೇರಿತ್ತು. ಈ ಸಿನಿಮಾವನ್ನು ಏಪ್ರಿಲ್ ನಲ್ಲೇ ಸೆಟ್ಟೇರಿಸಬೇಕು ಅನ್ನೋದು ಚಂದ್ರು ಪ್ಲಾನ್.ಇದರ ಜೊತೆಗೆ ಇನ್ನೂ ಅನೇಕ ಹೊಸ ಕೆಲಸಗಳಿಗೆ ಕೈ ಹಾಕಲಿದ್ದಾರಂತೆ ಚಂದ್ರು.
 

ವೆಬ್ದುನಿಯಾವನ್ನು ಓದಿ