ಬಾಹುಬಲಿ-2 ವೀಕೆಂಡ್ ಗಳಿಕೆ ಎಷ್ಟು ಗೊತ್ತಾ..? ಊಹಿಸಲೂ ಅಸಾಧ್ಯ
ಸೋಮವಾರ, 1 ಮೇ 2017 (13:33 IST)
ಬಾಹುಬಲಿ-2 ತೆರೆಕಂಡ ದಿನದಿಂದಲೂ ಬಾಕ್ಸ್ ಆಫೀಸ್`ನ ಎಲ್ಲ ದಾಖಲೆಗಳನ್ನ ಪುಡಿಗಟ್ಟುತ್ತಿದೆ. ಏಪ್ರಿಲ್ 28ರಂದು ತೆರೆ ಕಂಡ ರಾಜಮೌಳಿ ನಿರ್ದೇಶನದ ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ರಮ್ಯಕೃಷ್ಣ, ತಮನ್ನಾ ಅದ್ದೂರಿ ತಾರಾಗಣದ ಬಾಹುಬಲಿ-2 ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
ಬಾಲಿವುಡ್ ಚಿತ್ರಗಳೇ ಮಾಡಲಾಗದಷ್ಟು ಗಳಿಕೆಯನ್ನ ಬಾಹುಬಲಿ-2 ಮಾಡಿದೆ. ಮೂರು ದಿನಗಳ ಗಳಿಕೆಯಲ್ಲಿ ಸುಲ್ತಾನ್, ದಂಗಾಲ್ ಎಲ್ಲದರ ದಾಖಲೆಯನ್ನ ಹಿಂದಿಕ್ಕಿದೆ. ಪ್ರಸಿದ್ಧ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲಾ ಮಾಡಿರುವ ಟ್ವೀಟ್`ನಲ್ಲಿ ಬಾಹುಬಲಿ 3 ದಿನಗಳಲ್ಲಿ 540 ಕೋಟಿ ರೂಪಾಯಿ ಗಳಿಸಿದೆ.
ಭಾರತದಲ್ಲಿ ಬಾಹುಬಲಿ-2 ವೀಕೆಂಡ್ ಗಳಿಕೆ 415 ಕೋಟಿಯಾದರೆ ಅಮೆರಿಕ ಮತ್ತು ಇತರೆ ರಾಷ್ಟ್ರಗಳಲ್ಲಿ 125 ಕೋಟಿ ರೂ. ಸೇರಿ ಒಟ್ಟು 540 ಕೋಟಿ ಗಳಿಸಿದೆ. ನಿರೀಕ್ಷೆಯಂತೆ ಬಾಹುಬಲಿ-2 ಸಾವಿರ ಕೋಟಿ ರೂ. ಗಡಿ ದಾಟುವ ಎಲ್ಲ ಲಕ್ಷಣ ಕಾಣುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ