ಮತ್ತೊಂದು ದಾಖಲೆ ಬರೆದ ಬಾಹುಬಲಿ

ಮಂಗಳವಾರ, 4 ಆಗಸ್ಟ್ 2015 (10:34 IST)
ವಿಶ್ವದ ಫಿಲ್ಮ್ ಮೇಕರ್ಸ್‌ಗಳನ್ನು ಭಾರತೀಯ ಸಿನಿಮಾದ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಬಾಹುಬಲಿ. ರಿಲೀಸ್‌ ಆದ ದಿನದಿಂದಲೇ ಬಾಹುಬಲಿ ಸಿನಿಮಾ ಒಂದಾದ ಮೇಲೊಂದು  ರೆಕಾರ್ಡ್ ಬ್ರೇಕ್ ಮಾಡ್ತಿದೆ. ಇದೀಗ ಆದಾಯ ಗಳಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಧೂಳೆಬ್ಬಿಸಿದೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಆದಾಯ ಗಳಿಸಿದ ಚಿತ್ರ ಎಂಬ ಅನ್ನೋ ಟೈಟಲ್ ಅನ್ನ ತನ್ನ ಹೆಸರಿಗೆ ಸೇರಿಸಿಕೊಂಡಿದೆ. 
ಬಾಹುಬಲಿ ರಿಲೀಸ್‌ ಆದ 24 ದಿನಗಳಲ್ಲೇ ವಿಶ್ವದಾದ್ಯಂತ ಬರೋಬ್ಬರಿ 500 ಕೋಟಿ ಕಲೆಕ್ಷನ್‌ ಮಾಡಿದೆ. ಇದಕ್ಕೂ ಮೊದಲು ಆಮೀರ್ ಖಾನ್ ಅಭಿನಯದ ಪಿಕೆ ಒಟ್ಟು 740 ಕೋಟಿ ಗಳಿಸಿತ್ತು. ಧೂಮ್-3 ಚಿತ್ರ ಒಟ್ಟು 542 ಕೋಟಿ ಗಳಿಸಿತ್ತು. ಇದೀಗ 500 ಕೋಟಿ ಕ್ಲಬ್ ಸೇರಿಸೋ ಬಾಹುಬಲಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಹೊಸ ಅಲೆಯೆಬ್ಬಿಸಿದೆ.
 
ಐತಿಹಾಸಿಕ ಕಥಾಹಂದರ ಹೊಂದಿರೋ ಬಾಹುಬಲಿ ಜುಲೈ 10 ರಂದು ಜಗತ್ತಿನಾದ್ಯಂತ  ಬಿಡುಗಡೆಯಾಗಿತ್ತು . ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದಲ್ಲಿ ಚಿತ್ರದಲ್ಲಿ ರೆಬಲ್ ಸ್ಟಾರ್ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ, ತಮನ್ನಾ ಸೇರಿದಂತೆ ದೊಡ್ಡ ತಾರಾಗಣ ಮಿಂಚು ಹರಿಸಿತ್ತು. ಒಟ್ನಲ್ಲಿ 500 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ತಿರೋ ಬಾಹುಬಲಿ ಮತ್ತಷ್ಟು ದಾಖಲೆಗಳನ್ನ ತನ್ನ ಭುಜದ ಮೇಲೆ ಹೊತ್ತುಕೊಳ್ಳಲು ರೆಡಿಯಾಗಿದ್ದಾನೆ. 

ವೆಬ್ದುನಿಯಾವನ್ನು ಓದಿ