ಕಸ್ತೂರಿ ನಿವಾಸ- ಬಂಗಾರದ ಮನುಷ್ಯ ಪುನರ್ ನಿರ್ಮಾಣದ ಕನಸ ಹೊತ್ತಿರುವ ಯೋಗರಾಜ್ ಭಟ್

ಸೋಮವಾರ, 24 ನವೆಂಬರ್ 2014 (12:12 IST)
ನನಗೆ ಡಾ. ರಾಜ್ ಕುಮಾರ್ ಅವರಂತಹ ಹಿಮಾಲಯವನ್ನು ನೀಡಿದರೆ ತಾನು ಕಸ್ತೂರಿ ನಿವಾಸದಂತ ಚಿತ್ರಗಳನ್ನು ಮಾಡ ಬಲ್ಲೆ ಎನ್ನುವ ಚಾಲೆಂಜ್‌ ಎಸೆದಿದ್ದಾರೆ ಯೋಗರಾಜ್ ಭಟ್. 2007ರಲ್ಲಿ ಮುಂಗಾರು ಮಳೆ ಚಿತ್ರವನ್ನು ನಿರ್ದೇಶಿಸಿ, ಸೋತು ಹೈರಾಣಾಗಿದ್ದ ಕನ್ನಡ ಚಿತ್ರರಂಗಕ್ಕೆ ಜೀವದಾನ ಮಾಡಿದ್ದರು ಯೋಗರಾಜ್ ಭಟ್. 
 
ಅದಾದ ಬಳಿಕ ಕೆಲವು ಚಿತ್ರಗಳನ್ನು ನಿರ್ದೇಶಿಸಿದರು ಸಹಿತ ಅವರು ತಮ್ಮ ಗಮನವನ್ನು ನಿರ್ಮಾಣದ ಕಡೆಗೂ ನೆಟ್ಟರು. ಅದಾದ ಬಳಿಕ ಅವರು ಹಿಂದಿ ಚಿತ್ರ ನಿರ್ದೆಶಿಸುವತ್ತ ಗಮನ ಕೊಟ್ಟರಾದರು ಅದು ಯಾವುದೇ ರೀತಿಯ ಪ್ರಯೋಜನ ಕಾಣದೆ ಮುಂಬೈ ನಿಂದ ಬೆಂಗಳೂರಿಗೆ ವಾಪಸ್ಸು ಬಂದರು. 
 
ಕನ್ನಡ ಚಿತ್ರರಂಗದಲ್ಲಿ ಸುವರ್ಣ ಯುಗ ತೋರಿಸಿಕೊಟ್ಟ ಬಂಗಾರದ ಮನುಷ್ಯ ಮತ್ತು ಕಸ್ತೂರಿ ನಿವಾಸವನ್ನು ಮತ್ತೆ ನಿರ್ಮಿಸುವ ಆಶಯ ಹೊಂದಿರುವ ಭಟ್ಟರು, ಮುಂದಿನ ಪೀಳಿಗೆಗೆಂದು ತಾವು ಈ ಕಾಣಿಕೆ ನೀಡಲು ಸಿದ್ಧ ಆಗಿರುವುದಾಗಿ ಹೇಳಿದ್ದಾರೆ ಭಟ್ಟರು. 
 
ಈಗಿನ ಪೀಳಿಗೆಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ. ಮಹಾನ್ ಚೇತನ ಡಾ. ರಾಜ್ ಕುಮಾರ್ ಅವರು ಕಸ್ತೂರಿ ನಿವಾಸದ ಮೂಲಕ ಬಂದು ಗಾಂಧಿನಗರದ ವಾತಾವರಣ ಬದಲಾಯಿಸುವಂತೆ ಮಾಡಿದ್ದಾರೆ ಎನ್ನುವ ಅಭಿಮತ ಹೊಂದಿದ್ದಾರೆ ಭಟ್ಟರು. ಗಾಂಧಿನಗರದ ಕನ್ನಡದ ಮಂದಿ ಬಗ್ಗೆ ಇರಿಸುಮುರಿಸಾಗಿರುವುದು ಅವರ ಈ ಮಾತುಗಳು ಸ್ಪಷ್ಟ ಪಡಿಸಿತ್ತು. 
 
ಒಟ್ಟಾರೆ ಕಲರ್ ಕಸ್ತೂರಿ ನಿವಾಸ ಕನ್ನಡ ಚಿತ್ರರಂಗದ ಹೊಸ ಬೆಳಕಾಗಿದೆ. ಈ ಚಿತ್ರ ಹಿಂದೆ ಬಿಡುಗಡೆಯಾದಾಗ ಯಾವ ರೀತಿ ಗೆಲುವನ್ನು ಪಡೆದಿತ್ತೋ ಅದೇರೀತಿ ಈಗ ಸಹ ಪಡೆಯುತ್ತಿರುವುದು ಮಾತ್ರ ಕನ್ನಡ ಚಿತ್ರರಸಿಕರ ಅಭಿರುಚಿ ಎತ್ತಿ ತೋರುತ್ತಿದೆ. 

ವೆಬ್ದುನಿಯಾವನ್ನು ಓದಿ