ಬಿಬಿಕೆ9: ಮಂಗಳ ಗೌರಿ ಕಾವ್ಯಾ ಬಿಗ್ ಬಾಸ್ ನಿಂದ ಔಟ್

ಭಾನುವಾರ, 4 ಡಿಸೆಂಬರ್ 2022 (09:14 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಈ ವಾರ ಎಲಿಮಿನೇಟ್ ಆದ ಸ್ಪರ್ಧಿ ಮಂಗಳ ಗೌರಿ ಖ್ಯಾತಿಯ ಕಾವ್ಯಾ ಗೌಡ.

ನಿನ್ನೆ ಕಿಚ್ಚನ ಜೊತೆಗಿನ ಶೋನಲ್ಲಿ ಕಾವ್ಯಾ ಅತೀ ಕಡಿಮೆ ವೋಟ್ ಪಡೆದ ಹಿನ್ನಲೆಯಲ್ಲಿ ಎಲಿಮಿನೇಟ್ ಆಗಿ ಹೊರಬಿದ್ದಿದ್ದಾರೆ. ಇಂದು ಅಧಿಕೃತವಾಗಿ ಇದು ಘೋಷಣೆಯಾಗಲಿದೆ.

ಇದೀಗ ಮಹಿಳಾ ಸ್ಪರ್ಧಿಗಳ ಪೈಕಿ ಅಮೂಲ್ಯ, ದೀಪಿಕಾ ದಾಸ್, ಅನುಪಮಾ ಗೌಡ, ದಿವ್ಯಾ ಉರುಡುಗ ಮಾತ್ರ ಉಳಿದುಕೊಂಡಿದ್ದಾರೆ. ಟಾಸ್ಕ್ ವಿಚಾರ ಬಂದಾಗ ಕಾವ್ಯಾ ಹೆಚ್ಚಾಗಿ ಕಳಪೆ ಹಣೆಪಟ್ಟಿ ಹೊತ್ತುಕೊಳ್ಳುತ್ತಿದ್ದರು. ಇತರ ಸ್ಪರ್ಧಿಗಳಿಗೆ ಹೋಲಿಸಿದರೆ ಅವರು ಕೊಂಚ ಹಿಂದೆ ಬಿದ್ದಿದ್ದರು. ಹೀಗಾಗಿ ಅವರು ಎಲಿಮಿಮೇಟ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ