ಬಿಬಿಕೆ9: ಅಮೂಲ್ಯಗೆ ವಿಶೇಷ ಹಗ್ ಕೊಟ್ಟರಾ ರಾಕೇಶ್ ಅಮ್ಮ? ಕೊನೆಗೆ ಅಮ್ಮು ಕಣ್ಣೀರು ಹಾಕಿದ್ದೇಕೆ?

ಬುಧವಾರ, 30 ನವೆಂಬರ್ 2022 (09:00 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಈ ವಾರ ಫ್ಯಾಮಿಲಿ ವೀಕ್. ಸದಸ್ಯರ ಕುಟುಂಬ ಸದಸ್ಯರು ಒಬ್ಬೊಬ್ಬರಾಗಿ ನಿನ್ನೆಯಿಂದ ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ.

ನಿನ್ನೆ ದಿನ ದಿವ್ಯಾ ಉರುಡುಗ ತಾಯಿ, ರಾಕೇಶ್ ಅಡಿಗ ತಾಯಿ ಹಾಗೂ ಅರುಣ್ ಸಾಗರ್ ಪತ್ನಿ ಮನೆಗೆ ಪ್ರವೇಶಿಸಿದ್ದಾರೆ. ರಾಕೇಶ್ ಮತ್ತು ಅಮೂಲ್ಯ ಮನೆಯಲ್ಲಿ ಆತ್ಮೀಯರಾಗಿದ್ದಾರೆ. ಇದಕ್ಕೇ ಮನೆಯ ಇತರ ಸದಸ್ಯರು ಅವರ ಕಾಲೆಳೆಯುವುದು ಮಾಮೂಲು.

ಆದರೆ ನಿನ್ನೆ ರಾಕೇಶ್ ತಾಯಿ ಬಂದಾಗ ಅಮೂಲ್ಯರನ್ನು ತಬ್ಬಿಕೊಳ್ಳಲು ಹೋದರು. ಆದರೆ ಆಗ ಮಧ್ಯೆ ಯಾರೋ ಬಂದು ಮಾತನಾಡಿಸಿದರೆಂದು ಕೊನೆಯಲ್ಲಿ ಮತ್ತೆ ಆಗ ನಿನ್ನನ್ನು ತಬ್ಬಿಕೊಳ್ಳಬೇಕೆಂದಿದ್ದೆ ಎಂದು ಹಗ್ ನೀಡಿದರು. ಆದರೆ ಇದನ್ನೇ ಪ್ರಶಾಂತ್ ಸಂಬರಗಿ ತಪ್ಪಾಗಿ ಅರ್ಥೈಸಿಕೊಂಡು, ರಾಕೇಶ್ ತಾಯಿ ನಿರ್ಗಮಿಸಿದ ಬಳಿಕ ಅಮೂಲ್ಯಗೆ ವಿಶೇಷ ಹಗ್ ಕೊಟ್ಟರು ಎಂದು ತಮಾಷೆ ಮಾಡಿದರು. ಇದು ಅಮೂಲ್ಯಗೆ ನೋವು ನೀಡಿತು. ಹೀಗೆಲ್ಲಾ ಲೆಕ್ಕಾಚಾರ ಹಾಕಬೇಡಿ ಪ್ರಶಾಂತ್ ಸರ್ ಎಂದು ಎಚ್ಚರಿಕೆ ಕೊಟ್ಟರು.

ಬಳಿಕ ಏಕಾಂಗಿಯಾಗಿ ಕೂತು ಇದೇ ವಿಚಾರಕ್ಕೆ ಕಣ್ಣೀರು ಹಾಕಿದರು. ಬಳಿಕ ರಾಕೇಶ್ ಬಂದು ಸಮಾಧಾನಿಸಿದರು. ಅಂತಹ ಮಾತಿನಿಂದ ನೀವು, ನಿಮ್ಮ ತಾಯಿ ಎಷ್ಟು ತಪ್ಪಾಗಿ ಅರ್ಥೈಸಿರಬಹುದು ಎಂದು ಕಣ್ಣೀರು ಹಾಕಿದರು. ಕೊನೆಗೆ ರಾಕೇಶ್ ಸಮಾಧಾನಿಸಬೇಕಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ