ರಸ್ತೆಗೆ ಶಂಕರ್ ನಾಗ್ ಹೆಸರಿಡಲು ಅಸ್ತು ಎಂದ ಬಿಬಿಎಂಪಿ

ಮಂಗಳವಾರ, 26 ಮೇ 2015 (10:13 IST)
ಶಂಕರ್ ನಾಗ್ ಅವರ ಹೆಸರನ್ನು ನೂರಾರು ಆಟೋ ಚಾಲಕರು ತಮ್ಮ ಆಟೋ ಮೇಲೆ ಜೀವಂತವಾಗಿಸಿಟ್ಟುಕೊಂಡಿದ್ದಾರೆ. ಅವರು ದೇಹ ಇಲ್ಲದೆ ಇದ್ದರೂ ಅವರ ಆತ್ಮ ಆಟೋಚಾಲಕರ ಹೃದಯದಲ್ಲಿ ಮತ್ತು ಅವರ ಆಟೋಗಳ ಮೇಲೆ ಚಿರಂತನವಾಗಿದೆ ಎಂದೇ ಹೇಳ ಬಹುದಾಗಿದೆ. ಈಗ ದಿವಂಗಂತ ಶಂಕರ್ ನಾಗ್ ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡಲು ಬೃಹತ್ ಮಹಾನಗರ ಪಾಲಿಕೆ ನಿರ್ಧಾರ ಮಾಡಿದೆ. ಹೊಸೂರಿನಿಂದ ಬೇಗೂರು ಮಾರ್ಗವನ್ನು ದಿವಂಗತ ಶಂಕರ್ ನಾಗ್ ಅವರ ಹೆಸರನ್ನು ನೀಡಲು ನಿರ್ಧಾರ ಮಾಡಿದೆ ಬಿಬಿಎಂಪಿ. 
ಪ್ರಸ್ತುತ ಆ ರಸ್ತೆಯನ್ನು ಮಣಿಪಾಲ್ ಕಂಟ್ರಿ ರಸ್ತೆ ಎನ್ನುವ ಹೆಸರಿನಿಂದ ಕರೆಯಲಾಗುತ್ತಿದೆ. ಈ ರಸ್ತೆ ಕಾರ್ಮಿಕರ ಪ್ರಾವಿಡೆಂಟ್ ಫಂಡ್ ಸ್ಥಳೀಯ ಆಫೀಸ್ ನಿಂದ ಹಿಡಿದು ಹೊಸೂರ್ ರಸ್ತೆಗೆ ಮತ್ತು ಬೇಕುರ್ ಲೇಕ್ ಬಳಿ ಸೇರ್ಪಡೆ ಆಗುತ್ತದೆ. ಇದು ನೈಸ್ ರಸ್ತೆಯ ಸಮಾನಂತರವಾಗಿದೆ. 
 
ಈ ಹೆಸರನ್ನು  ಇನ್ನು 30 ದಿನಗಳಲ್ಲಿ ಅಧಿಕೃತಗೊಳಿಸಲಾಗುವುದು. ಈ ಮೊದಲು ಎಂ ಜಿ ರಸ್ತೆಯಲ್ಲಿರುವ ಥಿಯೇಟರ್ ಗೆ ಬಿಬಿಎಂಪಿ ಶಂಕರ್ ನಾಗ್ ಚಿತ್ರಮಂದಿರ ಎನ್ನುವ ಹೆಸರನ್ನು ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ಬೊಮ್ಮನಹಳ್ಳಿಯ ಪುಟ್ಟ ಅಡ್ಡರಸ್ತೆಗೆ ಶಂಕರ್ ನಾಗ್ ರಸ್ತೆ ಎಂದು ಸ್ಥಳೀಯರು ಕರೆದಿದ್ದರು. ಆದರೆ ಅದು ಅಧಿಕೃತವಾಗಿರಲಿಲ್ಲ. ಈಗ  ಅಧಿಕೃತವಾಗಿ ಸರ್ಕಾರಿ ದಾಖಲೆಗಳಲ್ಲಿ ಈ ಹೆಸರು ಸೇರ್ಪಡೆ ಆಗುತ್ತಿದೆ. 

ವೆಬ್ದುನಿಯಾವನ್ನು ಓದಿ