ರಸ್ತೆಗಳಿಗೆ ಕಲಾವಿದರ ಹೆಸರನ್ನಿಡಲು ಬಿಬಿಎಂಪಿ ಸಜ್ಜು...?!

ಶನಿವಾರ, 28 ಮಾರ್ಚ್ 2015 (10:29 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬಿಬಿಎಂಪಿ  ಬೆಂಗಳೂರಿನ ಕೆಲವು ರಸ್ತೆಗಳಿಗೆ ಚಂದನವನದಲ್ಲಿ ವಿಶಿಷ್ಟ ಸಾಧನೆ ಮಾಡಿದ ಕಲಾವಿದರ ಹೆಸರನ್ನು ನೀಡಲು ನಿರ್ಧಾರ ಮಾಡಿದೆ. ವಾರ್ಡ್ ನಂಬರ್ 66, ಸುಬ್ರಮಣ್ಯನಗರ ಸಂಗೊಳ್ಳಿ ರಾಯಣ್ಣ ಪಾರ್ಕ್ ಎದುರಲ್ಲಿ ಇರುವ ರಸ್ತೆಗೆ ದಿವಂಗತ ಹಾಸ್ಯನಟ ಎನ್.ಎಸ್.ರಾವ್ ಅವರ ಹೆಸರು ನೀಡಲು ನಿರ್ಧಾರ ಮಾಡಿದೆ. 
ವಾರ್ಡ್ 108, ಶ್ರೀ ರಾಮ ಮಂದಿರ ವಾರ್ಡ್ ಅಂದರೆ ರಾಜಾಜಿ ನಗರ ಆರನೇ ಬ್ಲಾಕ್ ನಿಂದ ರಾಜಾಜಿ ನಗರ ಪೊಲೀಸ್ ಠಾಣೆ ತನಕ ಇರುವ ರಸ್ತೆಗೆ ಪ್ರಸಿದ್ಧ ನಿರ್ದೇಶಕ ದಿವಂಗತ ಸಿದ್ಧಲಿಂಗಯ್ಯ ಅವರ ಹೆಸರು ನೀಡಲು ನಿರ್ಧರಿಸಲಾಗಿದೆಯಂತೆ.  
 
ಈ ರಸ್ತಯೇ ಪಕ್ಕದಲ್ಲಿ ಡಾ. ರಾಜ್ ಕುಮಾರ್ ರಸ್ತೆ ಇದೆ. ಇತ್ತೀಚಿಗೆ ಅನಾರೋಗ್ಯದ ಕಾರಣದಿಂದ ಸಿದ್ಧಲಿಂಗಯ್ಯ ಅವರು ಮರಣವನ್ನು ಅಪ್ಪಿದ್ದು ಎಲ್ಲರಿಗೂ ಗೊತ್ತೇ ಇದೆ. ನಾಯಂಡಹಳ್ಳಿ ಸರ್ಕಲ್‌‌‌‌‌ನಿಂದ ತುಮಕೂರ್ ರಸ್ತೆ ಅಂದರೆ ಪೀಣ್ಯ ರಸ್ತೆಗೆ ಡಾ. ರಾಜ್ ಕುಮಾರ್ ಪುಣ್ಯ ಭೂಮಿ ರಸ್ತೆ ಎಂದು ಹೆಸರಿಸಲಾಗುತ್ತಿದೆ. ಈ ಮೂರು ರಸ್ತೆಗಳ ಹೆಸರನ್ನು ಒಂದೇ ದಿನ ನಾಮಕರಣ ಮಾಡಲಾಗುತ್ತದೆ ಎಂದು ಬಿಬಿಎಂಪಿ ಕಡೆಯಿಂದ ಮಾಹಿತಿ ಹೊರ ಬಂದಿದೆ. ಇನ್ನು ಮುಂದೆ ತಮ್ಮ ಮೆಚ್ಚಿನ ಪ್ರತಿಭೆಗಳನ್ನು ಈ ಮೂಲಕ ನೆನಪಿಸಿ ಕೊಳ್ಳ ಬಹುದಾಗಿದೆ.

ವೆಬ್ದುನಿಯಾವನ್ನು ಓದಿ