ಡಾ.ರಾಜ್, ವಿಷ್ಣುವರ್ಧನ್ ಪ್ರತಿಮೆ ತೆರೆವಿಗೆ ಬಿಬಿಎಂಪಿ ಸಿದ್ಧತೆ

ಗುರುವಾರ, 21 ಅಕ್ಟೋಬರ್ 2021 (09:55 IST)
ಬೆಂಗಳೂರು: ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಶಂಕರ್ ನಾಗ್ ಸೇರಿದಂತೆ ಬೆಂಗಳೂರಿನಲ್ಲಿ ನಿರ್ಮಾಣವಾಗಿರುವ ಹಲವು ಗಣ್ಯರ ಪ್ರತಿಮೆಗಳ ತೆರವಿಗೆ ಬಿಬಿಎಂಪಿ ಸಿದ್ಧತೆ ನಡೆಸಿದೆ.


ಡಾ.ರಾಜ್, ವಿಷ್ಣುವರ್ಧನ್, ಶಂಕರ್ ನಾಗ್, ಬಸವಣ್ಣ, ಡಾ.ಅಂಬೇಡ್ಕರ್ ಸೇರಿದಂತೆ ನೂರಾರು ಪ್ರತಿಮೆಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ. ಈ ಪ್ರತಿಮೆಗಳನ್ನು ತೆರವುಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಕೆಲವು ದಿನಗಳ ಮೊದಲು ಬಿಬಿಎಂಪಿ ನಿರ್ಧಾರದ ವಿರುದ್ಧ ಡಾ.ರಾಜ್, ವಿಷ್ಣುವರ್ಧನ್ ಅಭಿಮಾನಿಗಳು ಒಟ್ಟಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಒಂದು ವೇಳೆ ಮೆಚ್ಚಿನ ನಟರ ಪ್ರತಿಮೆಗಳನ್ನು ತೆರವುಗೊಳಿಸಲು ಮುಂದಾದರೆ ಉಗ್ರ ಹೋರಾಟ ನಡೆಸಬೇಕಾಗುವುದು ಎಂದಿದ್ದರು. ಈಗ ಬಿಬಿಎಂಪಿ ಪ್ರತಿಮೆ ತೆರವುಗೊಳಿಸಿದರೆ ಮತ್ತೆ ರದ್ದಾಂತವಾಗುವುದು ಗ್ಯಾರಂಟಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ