ಕನ್ನಡದಲ್ಲೂ ರಿಲೀಸ್ ಆಗಲಿದೆ ಬೀಸ್ಟ್: ಕೆಜಿಎಫ್ ಎದುರು ನಿಲ್ಲುತ್ತಾ ವಿಜಯ್ ಸಿನಿಮಾ?

ಶನಿವಾರ, 26 ಮಾರ್ಚ್ 2022 (16:44 IST)
ಚೆನ್ನೈ: ದಳಪತಿ ವಿಜಯ್ ನಾಯಕರಾಗಿರುವ ಬೀಸ್ಟ್ ಸಿನಿಮಾ ರಿಲೀಸ್ ಡೇಟ್ ಏಪ್ರಿಲ್ 13 ರಂದು ಎಂಬುದು ಖಾತ್ರಿಯಾಗಿದೆ. ಜೊತೆಗೆ ಈ ಸಿನಿಮಾ ಬಹುಭಾಷೆಗಳಲ್ಲಿ ತೆರೆ ಕಾಣಲಿದೆ.

ಏಪ್ರಿಲ್ 14 ರಂದು ಕೆಜಿಎಫ್ 2 ಸಿನಿಮಾ ತೆರೆ ಕಾಣುತ್ತಿದೆ. ಈ ಮೂಲಕ ವಿಜಯ್ ಅಭಿನಯದ ‘ಬೀಸ್ಟ್’ ಕೆಜಿಎಫ್ 2 ಜೊತೆ ಬಾಕ್ಸ್ ಆಫೀಸ್ ನಲ್ಲಿ ಪೈಪೋಟಿ ನಡೆಸಲಿದೆ.

ಕೇವಲ ತಮಿಳು ಮಾತ್ರವಲ್ಲದೆ, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಒಟ್ಟು ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಮರುದಿನವೇ ಕೆಜಿಎಫ್ 2 ಬಿಡುಗಡೆಯಾಗುವ ಕಾರಣ ಕರ್ನಾಟಕ, ಆಂಧ್ರದಲ್ಲಿ ಬೀಸ್ಟ್ ಗೆ ಹೊಡೆತ ಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ