ಮದುವೆಗೂ ಮುನ್ನಾ ಭಾವಿ ಪತಿ ಜತೆ ಹೊಸ ಮನೆಯ ಹುಡುಕಾಟ ನಡೆಸಿದ ತಮನ್ನಾ

Sampriya

ಸೋಮವಾರ, 25 ನವೆಂಬರ್ 2024 (19:34 IST)
Photo Courtesy X
ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಅವರ ಡೇಟಿಂಗ್ ವಿಚಾರ ಗುಟ್ಟಾಗಿಲ್ಲ. ಈವೆಂಟ್‌ಗಳು, ರೆಡ್ ಕಾರ್ಪೆಟ್‌ಗಳು ಮತ್ತು ಡೇಟ್ ನೈಟ್‌ಗಳಲ್ಲಿ ಕೈ ಕೈ ಹಿಡಿದು ಒಟ್ಟಿಗೆ ಕ್ಯಾಮೆರಾಗೆ ಪೋಸ್ ನೀಡುತ್ತಿರುವ ಈ ಜೋಡಿ  ಮುಂದಿನ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆಂಬ ಸುದ್ದಿಯಿದೆ.

ಇದೀಗ ಮದುವೆಗೂ ಮುನ್ನಾ ಈ ಜೋಡಿ ಹೊಸ ಮನೆಯನ್ನು ಹುಡುಕಲು ಆರಂಭಿಸಿದ್ದಾರೆ. ಮನೆ ಖರೀದಿ ಬೆನ್ನಲ್ಲೇ ಈ ಲವ್‌ ಬರ್ಡ್ಸ್‌ ಹಸೆಮಣೆ ಏರಲು ಸಜ್ಜಾಗಿದೆ. ಇದುವರೆಗೂ ತಮ್ಮ ಪ್ರೀತಿ ವಿಚಾರವನ್ನು ಅಧಿಕೃತವಾಗಿ ಹೇಳಿಕೊಳ್ಳದ ಈ ಜೋಡಿ, ಪಾಪರಾಚಿಗಳ ಪ್ರಶ್ನೆಗೆ ನಾಚಿನೀರಾಗಿದ್ದು ಇದೆ.

ಇಬ್ಬರು ಸ್ಟಾರ್‌ಗಳು ಲಸ್ಟ್ ಸ್ಟೋರೀಸ್ 2 ರ ಸೆಟ್‌ನಲ್ಲಿ ಮೊದಲ ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದ ಇಬ್ಬರು ಡೇಟಿಂಗ್‌ನಲ್ಲಿರುವುದು ಗೊತ್ತಿರುವ ವಿಚಾರ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ