ಫಿಲಂ ಚೇಂಬರ್ ಅಧ್ಯಕ್ಷರಾಗಿ ಆಯ್ಕೆಯಾದ ಭಾ.ಮಾ. ಹರೀಶ್
ಸಾ.ರಾ. ಗೋವಿಂದು ಮತ್ತು ಭಾ.ಮಾ. ಹರೀಶ್ ನಡುವೆ ಸ್ಪರ್ಧೆ ನಡೆದಿತ್ತು. ಭಾ.ಮಾ. ಹರೀಶ್ ಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಘಟಾನುಘಟಿಗಳ ಬೆಂಬಲವಿತ್ತು.
ಎರಡೂ ಬಣಗಳ ನಡುವೆ ತೀವ್ರ ಪೈಪೋಟಿಯಿತ್ತು. ಅಂತಿಮವಾಗಿ ಭಾ.ಮಾ. ಹರೀಶ್ ಹೆಚ್ಚು ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.