ಏ ದಿಲ್ ಹೇ ಚಿತ್ರಕ್ಕೆ ಭಜರಂಗ ದಳ ಪ್ರತಿಭಟನೆ

ಶನಿವಾರ, 29 ಅಕ್ಟೋಬರ್ 2016 (12:14 IST)
ಕೋಲ್ಕತ್ತಾ: ಏ ದಿಲ್ ಹೇ ಮುಷ್ಕಿಲ್ ಚಿತ್ರ ಬಿಡುಗಡೆಯಾದರೂ ಅದಕ್ಕೆ ಪ್ರತಿಭಟನೆ ಬಿಸಿ ತಪ್ಪಿಲ್ಲ. ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಚಿತ್ರಮಂದಿರವೊಂದರ ಎದುರು ಭಜರಂಗದಳ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.

ಸುಮಾರು 20 ನಿಮಿಷಗಳ ಕಾಲ ಭಜರಂಗದಳ ಕಾರ್ಯಕರ್ತರು ಚಿತ್ರ ಬಿಡುಗಡೆ ವಿರೋಧಿಸಿ ಪ್ರತಿಭಟನೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ ಸುಮಾರು 80 ರಿಂದ 100 ಕಾರ್ಯಕರ್ತರು  ಸಿಟಿ  ಲೈಫ್ ಮಾಲ್ ಎದುರು ಜಮಾಯಿಸಿದ್ದರು. ಪ್ರತಿಭಟನಾಕಾರರು ದೇಶಭಕ್ತಿಗೆ ಸಂಬಂಧಪಟ್ಟ ಕೂಗು ಹಾಕಿದರು ಎಂದಿದ್ದಾರೆ ಪೊಲೀಸರು.

ಈ ಚಿತ್ರದಲ್ಲಿ ಪಾಕಿಸ್ತಾನ ಮೂಲದ ನಟ ನಟಿಸಿದ್ದಾನೆಂಬುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಚಿತ್ರ ಬಿಡುಗಡೆಗೆ ಎಂಎನ್ಎಸ್ ಕಾರ್ಯಕರ್ತರು ಒಪ್ಪಿಗೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ