ಶಿವಣ್ಣ ಬರ್ತ್ ಡೇಗೆ ಭಜರಂಗಿ 2 ಟೀಸರ್

ಶನಿವಾರ, 10 ಜುಲೈ 2021 (10:37 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಬರ್ತ್ ಡೇಗೆ ಭಜರಂಗಿ 2 ಟೀಸರ್ ಬಿಡುಗಡೆಯಾಗಲಿದ್ದು, ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಗಲಿದೆ.


ಕೊರೋನಾ ಕಾರಣದಿಂದ ಶಿವಣ್ಣ ಈ ಬಾರಿ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದಿದ್ದರು. ಆದರೆ ಅಭಿಮಾನಿಗಳಿಗೆ ನಿರಾಸೆಯಂತೂ ಆಗಲ್ಲ.

ಹರ್ಷ ನಿರ್ದೇಶನದ ಶಿವಣ್ಣ ವಿಶಿಷ್ಟ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಭಜರಂಗಿ 2 ಟೀಸರ್ ಜುಲೈ 12 ರಂದು ಲಾಂಚ್ ಆಗಿ ಅಭಿಮಾನಿಗಳಿಗೆ ಖುಷಿ ಕೊಡಲಿದೆ. ಎಲ್ಲಾ ಸರಿ ಹೋಗಿದ್ದರೆ ಈ ಸಿನಿಮಾ ಇಷ್ಟರಲ್ಲೇ ಬಿಡುಗಡೆಯಾಗಬೇಕಿತ್ತು.  ಆದರೆ ಕೊರೋನಾ ಕಾರಣದಿಂದ ಮುಂದಕ್ಕೆ ಹೋಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ