ಕಿರುತೆರೆಯಲ್ಲಿ ಭಜರಂಗಿ ಭಾಯಿ ಜಾನ್

ಸೋಮವಾರ, 12 ಅಕ್ಟೋಬರ್ 2015 (11:42 IST)
ಇಷ್ಟು ದಿನ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಕಮಾಲ್ ಮಾಡಿದ್ದ ಭಜರಂಗಿ ಭಾಯಿಜಾನ್ ಸಿನಿಮಾ ಇದೀಗ ಕಿರುತೆರೆಯಲ್ಲೂ ಕಮಾಲ್ ಮಾಡಿ ಮತ್ತೊಂದು ದಾಕಲೆ ನಿರ್ಮಿಸಿದೆ. ನಿನ್ನೆ ಸ್ಟಾರ್ ಗೋಲ್ಡ್ ಎಂಬ ಖಾಸಗಿ ವಾಹಿನಿಯಲ್ಲಿ ಸಿನಿಮಾ ಪ್ರಸಾರಮಾಗುವ ಮೂಲಕ ಅಲ್ಲೂ ಒಂದು ದಾಖಲೆ ನಿರ್ಮಿಸಿದೆ.
ಭಜರಂಗಿ ಭಾಯಿಜಾನ್ ಸಿನಿಮಾ ಪ್ರಸಾರಕ್ಕಾಗಿಯೇ ಬರೋಬ್ಬರಿ 60 ಕೋಟಿ ರೂಪಾಯಿ ಜಾಹೀರಾತಿನಿಂದಲೇ ಆದಾಯ ಪಡೆದಿದೆಯಂತೆ. ಇದುವರೆಗೂ ಯಾವುದೇ ಸಿನಿಮಾ ಕೂಡ ಜಾಹೀರಾತಿನಿಂದಲೇ ಇಷ್ಟೊಂದು ಪ್ರಮಾಣ ಆದಾಯ ಪಡೆದಿರಲಿಲ್ಲವಂತೆ. ಸಿನಿಮ ಬಿಡುಗಡೆಯಾಗಿನಿಂದಲೂ ಒಂದಿಲ್ಲೊಂದು ದಾಖಲೆಗಳನ್ನು ನಿರ್ಮಿಸುತ್ತಲೇ ಬಂದಿತ್ತು. ಇದೀಗ ಮತ್ತೆ ಹೊಸ ದಾಖಲೆ ಬರೆದಿದೆ. ಇನ್ನು ಕೆಲವು ವಾರಗಳ ಬಳಿಕ ಸಿನಿಮಾ ಮತ್ತೆ ಇದೇ ವಾಹಿನಿಯಲ್ಲಿ ಮತ್ತೆ ಪ್ರಸಾರವಾಗಲಿದೆಯಂತೆ. 
 
ಇನ್ನು ಸಿನಿಮಾಕ್ಕೆ ಕೆಲವು ಕಂಪನಿಗಳು ಕೋಟಿಗಟ್ಟಲೇ ಸ್ಪಾನ್ಸರ್ ಶಿಫ್ ನೀಡಿವೆ. ಅಮೆಜಾನ್ ಸುಮಾರು 8 ರಿಂದ 10ಕೋಟಿಯಷ್ಟು ಮೊತ್ತದ ಸ್ಪಾನ್ಸರ್ ಶಿಫ್ ನೀಡಿದ್ರೆ ಆಸ್ಕ್ ಮಿ ಡಾಕಾಮ್ ಕೂಡ ಕೋಟಿಗಟ್ಟಲೇ ನೀಡಿದೆಯಂತೆ.ಈಗಾಗಲೇ ಬಾಕ್ಸಾಫೀಸ್ ನಲ್ಲಿ ಸುಮುರು 500 ಕೋಟಿಯಷ್ಚು ಗಳಿಕೆ ಮಾಡಿರುವ ಭಜರಂಗಿ ಭಾಯಿಜಾನ್ ಸಿನಿಮಾ ಈಗ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ.

ವೆಬ್ದುನಿಯಾವನ್ನು ಓದಿ