ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ವಿಶಿಷ್ಟವಾಗಿ ನೆರವಾಗಲಿರುವ ಭರಾಟೆ ಚಿತ್ರತಂಡ

ಶುಕ್ರವಾರ, 9 ಆಗಸ್ಟ್ 2019 (10:01 IST)
ಬೆಂಗಳೂರು: ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಸ್ಯಾಂಡಲ್ ವುಡ್ ನಟ, ನಟಿಯರು ಮುಂದಾಗಿದ್ದಾರೆ.ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೂ ನೆರವಾಗಲು ಮನವಿ ಮಾಡುತ್ತಿದ್ದಾರೆ.


ಈ ವೇಳೆ ಭರಾಟೆ ಚಿತ್ರತಂಡ ವಿಶಿಷ್ಟವಾಗಿ ನೆರವಾಗಲು ಮುಂದಾಗಿದೆ. ಶ್ರೀಮುರಳಿ ನಾಯಕರಾಗಿರುವ ಭರಾಟೆ ಸಿನಿಮಾ ಮೊದಲ ಹಾಡು ಇಂದು ಸ್ವಿಜರ್ ಲ್ಯಾಂಡ್ ನಿಂದ ಚಿತ್ರತಂಡ ಬಿಡುಗಡೆ ಮಾಡುತ್ತಿದೆ.

ಈ ಸಿನಿಮಾದ ಅಡಿಯೋ ರಿಲೀಸ್ ನಲ್ಲಿ ಬಂದ ಹಣವನ್ನು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೀಡಲು ಚಿತ್ರತಂಡ ಮುಂದಾಗಿದೆ. ಆ ಮೂಲಕ ತಮ್ಮಿಂದಾದ ರೀತಿಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ನಿಂತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ