ನೆರೆ ಸಂತ್ರಸ್ತರಿಗೆ ಪರಿಸ್ಥಿತಿ ಹೇಗಿದೆ ಹೇಳಿ! ನನ್ನ ಕೈಲಾಗಿದ್ದನ್ನು ಮಾಡ್ತೀನಿ ಎಂದು ಮನವಿ ಮಾಡಿದ ಕಿಚ್ಚ ಸುದೀಪ್

ಗುರುವಾರ, 8 ಆಗಸ್ಟ್ 2019 (09:51 IST)
ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ವಿಪರೀತ ಮಳೆಯಿಂದಾಗಿ ಹಲವು ಜಿಲ್ಲೆ, ಹಳ್ಳಿಗಳು ಜಲಾವೃತವಾಗಿವೆ. ಜನರ ಈ ಸಂಕಷ್ಟ ಪರಿಸ್ಥಿತಿಗೆ ನೆರವಾಗಲು ಸೆಲೆಬ್ರಿಟಿಗಳೂ ಮುಂದೆ ಬರುತ್ತಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿಕ ಇದೀಗ ಕಿಚ್ಚ ಸುದೀಪ್ ಕೂಡಾ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ಸುದೀಪ್ ತಮ್ಮ ಟ್ವಿಟರ್ ನಲ್ಲಿ ವಿಡಿಯೋ ಸಂದೇಶ ನೀಡಿದ್ದು, ಅಲ್ಲಿ ಅಕ್ಕಪಕ್ಕ ಇರುವವರು ನೆರೆ ಪೀಡಿತ ಪ್ರದೇಶಗಳ ಪರಿಸ್ಥಿತಿ ಹೇಗಿದೆ ಎಂದು ನನಗೆ ತಿಳಿಸಿ. ನನ್ನ ಕೈಲಾದ ಸಹಾಯ ಮಾಡಲು ಪ್ರಯತ್ನ ಪಡುತ್ತೇನೆ ಎಂದು ಮನವಿ ಮಾಡಿದ್ದಾರೆ.

ಅಲ್ಲಿ ಅಕ್ಕಪಕ್ಕದವರು ಹೋಗಿ ಪರಿಸ್ಥಿತಿ ತಿಳಿದುಕೊಳ್ಳಬಹುದು ಎಂದು ಹೀಗೆ ಹೇಳುತ್ತಿದ್ದೇನೆ. ದಯವಿಟ್ಟು ಯಾರೂ ತಪ್ಪು ತಿಳಿದುಕೊಳ್ಳಬೇಡಿ. ನಮ್ಮ ಕೈಲಿ ಏನು ಸಹಾಯ ಸಾಧ್ಯವೋ ಅದೆಲ್ಲವನ್ನೂ ಮಾಡೋಣ. ಇದನ್ನು ನನ್ನ ಮನವಿ ಎಂದುಕೊಳ್ಳಿ ಎಂದು ಸುದೀಪ್ ವಿನಂತಿಸಿದ್ದಾರೆ. ಕಿಚ್ಚನ ಈ ವಿಡಿಯೋ ಸಂದೇಶಕ್ಕೆ ಹಲವು ಅಭಿಮಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ