ದೊಡ್ಡಮನೆಯ ಹಿರಿಯ ಮೆಂಬರ್ ಆಗಿದ್ದಾರೆ ಡಾ. ವಿಷ್ಣುವರ್ಧನ್ ಭಾರತಿ...

ಬುಧವಾರ, 1 ಅಕ್ಟೋಬರ್ 2014 (08:52 IST)
ಸೂರಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ದೊಡ್ಮನೆ ಹುಡುಗ. ಈ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್ ಅಭಿನಯಿಸುತ್ತಿರುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ಚಿತ್ರದಲ್ಲಿ ರಮ್ಯ ನಾಯಕಿಯಾಗಿ ನಟಿಸುವ ಸುದ್ದಿ ಇತ್ತು, ಆದರೆ ಆಕೆ ಆ ಪ್ರಾಜಕ್ಟ್ ನಿಂದ ಹೊರ ಬಂದಿದ್ದರ ಕುರಿತು ನಾವು ಈ ಮೊದಲು ಬರೆದಿದ್ದೆವು. 

ಈಗ ದೊಡ್ಮನೆ ಹುಡುಗ ಚಿತ್ರಕ್ಕೆ ಬಹುಮುಖ್ಯ ಪಾತ್ರದ ಸೇರ್ಪಡೆ  ಆಗಿದೆ. ಈ ಚಿತ್ರದ ಕಣ್ಣಾಗಲು ಹೊರಟಿರುವವರು ಡಾ. ಭಾರತಿ ವಿಷ್ಣುವರ್ಧನ್‌. ಈ ಚಿತ್ರದಲ್ಲಿ ಡಾ. ಭಾರತಿ ವಿಷ್ಣುವರ್ಧನ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ ಎಂದು ಹರಡಿರುವ ಸುದ್ದಿಗೆ ಸೂರಿ ಕಡೆಯಿಂದ ಕೇವಲ ಇದು ಸುದ್ದಿಯಲ್ಲ ನಿಜ ಎನ್ನುವ ಉತ್ತರ ಬಂದಿದೆ. 
 
ಈ ಚಿತ್ರದಲ್ಲಿ  ಅಂಬರೀಶ್‌ ಮತ್ತು ಸುಮಲತಾ ಸಹ ನಟಿಸುತ್ತಿದ್ದಾರೆ.  ಡಾ. ಭಾರತಿ ವಿಷ್ಣುವರ್ಧನ್‌  ಅವರು ಅಂಬಿಯ ಅಕ್ಕನ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ! ಅಂಬರೀಶ್‌ ಮತ್ತು ಭಾರತಿ ಅವರು ಮತ್ಸರ  ಮುಂತಾದ  ಚಿತ್ರಗಳಲ್ಲಿ ಒಟ್ಟಾಗಿ  ಕೆಲಸ ಮಾಡಿದ್ದರು. 

ವೆಬ್ದುನಿಯಾವನ್ನು ಓದಿ