‘ಭೀಮಸೇನ ನಳಮಹಾರಾಜ’ ಇಂದು ರಿಲೀಸ್: ಇಲ್ಲಿ ವೀಕ್ಷಿಸಿ!

ಗುರುವಾರ, 29 ಅಕ್ಟೋಬರ್ 2020 (10:19 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಥಿಯೇಟರ್ ತೆರೆದ ಮೇಲೂ ಆಪ್ ಮೂಲಕ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ. ಪುಷ್ಕರ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಭೀಮಸೇನ ನಳಮಹಾರಾಜ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ.


ಈ ಸಿನಿಮಾವನ್ನು ಕಾರ್ತಿಕ್ ಸರಗೂರು ನಿರ್ದೇಶಿಸಿದ್ದಾರೆ. ಹೆಸರೇ ಹೇಳುವಂತೆ ಇದು ಅಡುಗೆಯವನೊಬ್ಬ ಕತೆ, ವ್ಯಥೆ ಇರುವ ಸಿನಿಮಾ. ಅರವಿಂದ್ ಅಯ್ಯರ್, ಪ್ರಿಯಾಂಕ ತಿಮ್ಮೇಶ್ ಪ್ರಧಾನ ಪಾತ್ರದಲ್ಲಿದ್ದಾರೆ. ಈಗಾಗಲೇ ಟ್ರೈಲರ್, ಹಾಡು ಬಿಡುಗಡೆಯಾಗಿದ್ದು, ಸಾಕಷ್ಟು ನಿರೀಕ್ಷೆ ಮೂಡಿದೆ. ಇಂದಿನಿಂದ ಇದು ಅಮೆಝೋನ್ ಪ್ರೈಮ್ ಆಪ್ ನಲ್ಲಿ ಲಭ್ಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ