ಸಿನಿಮಾದಲ್ಲಷ್ಟೇ ನನ್ನ ಮುನಿರತ್ನ ಸಂಬಂಧ: ನಿಖಿಲ್ ಕುಮಾರಸ್ವಾಮಿ
ಬುಧವಾರ, 28 ಅಕ್ಟೋಬರ್ 2020 (11:15 IST)
ಬೆಂಗಳೂರು: ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿರುವ ನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ ನಿರ್ಮಾಪಕ ಮುನಿರತ್ನ ಬಗ್ಗೆ ಮಾತನಾಡಿದ್ದಾರೆ.
ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾದಲ್ಲಿ ನಿಖಿಲ್ ಅಭಿಮನ್ಯು ಪಾತ್ರ ಮಾಡಿದ್ದರು. ಹೀಗಾಗಿ ಇಬ್ಬರ ನಡುವಿನ ಸಂಬಂಧದ ಬಗ್ಗೆ ನಿಖಿಲ್ ಮಾತನಾಡಿದ್ದಾರೆ. ನನ್ನ ಮುನಿರತ್ನ ಸಂಬಂಧ ಸಿನಿಮಾಕ್ಕಷ್ಟೇ ಸೀಮಿತ. ಅವರು ನಿರ್ಮಾಪಕ, ನಾನು ನಟ. ಹಾಗಾಗಿ ಅವರ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದೆನಷ್ಟೇ. ಆದರೆ ಈಗ ಜೆಡಿಎಸ್ ಕಾರ್ಯಕರ್ತನಾಗಿ ನನ್ನ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದೇನೆ ಎಂದಿದ್ದಾರೆ.