ಪಾತ್ರಕ್ಕಾಗಿ ನಿತ್ಯ ಜಿಮ್‌ಗೆ ತೆರಳುತ್ತಿರುವ ಬಿಗ್ ಬಿ

ಗುರುವಾರ, 21 ಮೇ 2015 (10:28 IST)
ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತನ್ನ ಪಾತ್ರಕ್ಕಾಗಿ ಎಷ್ಟು ಕಷ್ಟ ಬೇಕಾದರೂ ಪಡಲು ಸಿದ್ಧವಾಗುತ್ತಾರೆ. ತಮ್ಮ ಮುಂದಿನ ಚಿತ್ರಕ್ಕಾಗಿ ಬಿಗ್ ಬಿ ಪ್ರಸ್ತುತ ತಮ್ಮ ಪಾತ್ರಕ್ಕಾಗಿಯೇ ಜಿಮ್‌ಗೆ ಹೋಗಿ ಕಸರತ್ತು ನಡೆಸುತ್ತಿದ್ದಾರೆ. 
72ರ ಹರೆಯದ ಬಿಗ್ ಬಿ, ತಮ್ಮ ದೇಹದ ರಚನೆಯನ್ನು ಬದಲಾಯಿಸಿಕೊಳ್ಳಬೇಕಿದೆಯಂತೆ. ಅದಕ್ಕಾಗಿ ಅವರು ಜಿಮ್‌ಗೆ ಹೋಗುತ್ತಿರುವ ಅವರು, ಸರಿಯಾದ ರೀತಿಯಲ್ಲಿಯೇ ವರ್ಕ್ ಔಟ್ ಮಾಡುತ್ತಿದ್ದು, ಮೂರು ತಿಂಗಳ ಬಳಿಕ ದೇಹದಲ್ಲಿ ಬದಲಾವಣೆ ಕಂಡು ಬರಲಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ