ತಂದೆಯ ಸ್ಮಾರಕ ನಿರ್ಮಾಣಕ್ಕೆ ಅಯೋದ್ಯೆಯಲ್ಲಿ ಭೂ ಖರೀದಿಸಿದ ಬಿಗ್‌ಬಿ

Sampriya

ಮಂಗಳವಾರ, 11 ಮಾರ್ಚ್ 2025 (19:29 IST)
Photo Courtesy X
ಬೆಂಗಳೂರು: ಬಿಗ್‌ಬಿ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 54,454 ಚದರ ಅಡಿ ವಿಸ್ತೀರ್ಣದ ಮತ್ತೊಂದು ಭೂಮಿಯನ್ನು ಖರೀದಿಸಿದ್ದಾರೆ, ಇದು ಪೂಜ್ಯ ರಾಮ ಮಂದಿರದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿದೆ.

ಹರಿದಾಡುತ್ತಿರುವ ವರದಿಗಳ ಪ್ರಕಾರ, ಅವರು ತಮ್ಮ ತಂದೆ ಹರಿವಂಶ್ ರಾಯ್ ಬಚ್ಚನ್ ಅವರ ಸ್ಮಾರಕವನ್ನು ನಿರ್ಮಿಸುವ ಸಲುವಾಗಿ ಈ ಭೂಮಿಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

ನಟ ಹರಿವಂಶ್ ರಾಯ್ ಬಚ್ಚನ್ ಸ್ಮಾರಕ ಟ್ರಸ್ಟ್ ಅನ್ನು 2013 ರಲ್ಲಿ ಪ್ರಾರಂಭಿಸಿದ್ದರು. TOI ಯಲ್ಲಿನ ವರದಿಯ ಪ್ರಕಾರ, ಹರಿವಂಶ್ ರಾಯ್ ಬಚ್ಚನ್ ಟ್ರಸ್ಟ್ 54,454 ಚದರ ಅಡಿ ವಿಸ್ತೀರ್ಣದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ, ಇದು ಪ್ರಸಿದ್ಧ ಹಿಂದಿ ಕವಿಯ ಜೀವನ ಮತ್ತು ಕೃತಿಗಳಿಗೆ ಮೀಸಲಾಗಿರುವ ಸ್ಮಾರಕವನ್ನು ನಿರ್ಮಿಸಲು ಸಾಧ್ಯ ಎಂದು ಮಂಗಳವಾರ ತಿಳಿಸಿದೆ.

ಈ ಮೂಲಕ ಅಯೋಧ್ಯೆಯಲ್ಲಿ ಬಚ್ಚನ್ ದಂಪತಿ ಎರಡನೇ ಭೂಮಿಯನ್ನು ಖರೀದಿ ಮಾಡಿದ್ದಾರೆ. ಜನವರಿ 2024 ಬಿಗ್‌ಬಿ 14.50 ಕೋಟಿ ಮೌಲ್ಯದ ವಿಸ್ತಾರವಾದ ಜಮೀನನ್ನು ಖರೀದಿಸಿದ್ದಾರೆಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ