ಕಂಗನಾ ಜೊತೆ ನಟಿಸಲು ಕಾತರರಾಗಿದ್ದಾರಂತೆ ಬಿಗ್ ಬಿ

ಸೋಮವಾರ, 3 ಆಗಸ್ಟ್ 2015 (10:35 IST)
ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಹಿಂದಿನಿಂದಲೂ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಹೊಸಬರ ಜೊತೆ ನಟಿಸುವಾಗಲು ಅಮಿತಾಬ್ ಬಚ್ಚನ್ ಯಾವುದೇ ಅಹಂ ಇಲ್ಲದೇ ಅವರಿಗೆ ಉತ್ತಮ ಸಹಕಾರ ನೀಡುತ್ತಾರೆ. ಇದೀಗ ಬಿಗ್ ಬಿ ಗೆ ಕಂಗನಾ ಜೊತೆ ನಟಿಸುವ ಅವಕಾಶ ದೊರೆತಿದೆಯಂತೆ ಅದಕ್ಕಾಗಿ ಬಿಗ್ ಬಿ ಫುಲ್ ಖುಷಿಯಾಗಿದ್ದಾರಂತೆ.
ಹೌದು... ಜಾಹೀರಾತೊಂದರಲ್ಲಿ  ಅಮಿತಾಬ್ ಹಾಗೂ ಕಂಗನಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕಂಗನಾ ನಟನೆಯನ್ನು ನೋಡಿ ಮೆಚ್ಚಿಕೊಂಡಿರುವ ಬಿಗ್ ಬಿ ಆಕೆಯ ಜೊತೆ ಕಾಣಿಸಿಕೊಂಡಿರೋದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಬಿಗ್ ಬಿ ಇಷ್ಟೊಂದು ಖುಷಿಯಾಗಿರುವಾಗ ಕಂಗನಾ ಕೇಳಬೇಕಾ. ಆಕೆಯೂ ಜಾಹೀರಾತು ಟಿವಿ ಪರದೆಯ ಮೇಲೆ ಯಾವಾಗ ಬರುತ್ತೆ ಅಂತಾ ಕಾಯುತ್ತಿದ್ದಾಳಂತೆ.
 
ಒಟ್ಟಿನಲ್ಲಿ ಅಮಿತಾಬ್ ಹಾಗೂ ಕಂಗನಾ ಜುಗಲ್ ಬಂದಿ ಹೇಗಿರುತ್ತೆ ಅಂತಾ ಅಭಿಮಾನಿಗಳು ಕಾಯುತ್ತಿದ್ರೆ ಇತ್ತ ಅಮಿತಾಬ್ ಹಾಗೂ ಕಂಗನಾ ಕೂಡ ಆ ಜಾಹೀರಾತಿ ಗಾಗಿ ವೆಯ್ಟ್ ಮಾಡುತ್ತಿದ್ದಾರಂತೆ. ಆದ್ರೆ ಎಲ್ಲಾ ನೋಡುತ್ತಿದ್ರೆ ಈ ಜಾಹೀರಾತು ಕ್ಲಿಕ್  ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ವೆಬ್ದುನಿಯಾವನ್ನು ಓದಿ