BigBoss Season 11: ಈ ವಾರ ಈ ಸ್ಪರ್ಧಿನೇ ದೊಡ್ಮನೆಯಿಂದ ಔಟ್‌

Sampriya

ಭಾನುವಾರ, 1 ಡಿಸೆಂಬರ್ 2024 (16:32 IST)
Photo Courtesy X
ಬಿಗ್‌ಬಾಸ್‌ ಸೀಸನ್ 11ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಶೋಭಾ ಶೆಟ್ಟಿ ಹಾಗೂ ರಜತ್ ಅವರು ಎಂಟ್ರಿ ಕೊಟ್ಟ ನಂತರ ದಿನದಿಂದ ದಿನಕ್ಕೆ ಬಿಗ್ಬಾಸ್ ಮನೆಯ ಆಟ ರೋಚಕ ತಿರುವು ಪಡೆಯುತ್ತಿದೆ.  ಈಗಾಗಲೇ ನಾಮಿನೇಷನ್ ಲಿಸ್ಟ್‌ನಲ್ಲಿದ್ದ ತ್ರಿವಿಕ್ರಮ್, ಗೋಲ್ಡ್‌ ಸುರೇಶ್ ಅವರು ಶನಿವಾರದ ಎಪಿಸೋಡ್‌ನಲ್ಲಿ ಸೇವ್ ಆಗಿದ್ದಾರೆ.  

ಇದೀಗ ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಶೋಭಾ ಶೆಟ್ಟಿ ಸೇವ್ ಆದರೂ ಮನೆಯಿಂದ ಹೊರಹೋಗುವುದಾಗಿ ಕಣ್ಣೀರಿಟ್ಟಿದ್ದರೆ, ಇತ್ತ ಐಶ್ವರ್ಯಾ ಸಿಂಧೋಗಿ ಎಲಿಮಿನೇಟ್ ಆಗಿದ್ದಾರೆ ಎನ್ನಲಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ದೊಡ್ಮನೆಯಲ್ಲಿ 60 ದಿನಗಳನ್ನು ಪೂರೈಸಿರೋ ಐಶ್ವರ್ಯಾ ಅವರು ಮನರಂಜನೆ, ಫಿಸಿಕಲ್ ಟಾಸ್ಕ್‌ಗಳಲ್ಲಿ ಗುರುತಿಸಿಕೊಂಡಿದ್ದಕ್ಕಿಂತ ಶಿಶಿರ್ ಅವರ ಜತೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇದೀಗ ಇವರ ದೊಡ್ಮನೆ ಆಟಕ್ಕೆ ಬ್ರೇಕ್‌ ಬಿದ್ದಿದೆ ಎನ್ನಲಾಗಿದೆ.

ಸೈಲೆಂಟ್ ಆಗಿದ್ದ ಐಶ್ವರ್ಯಾ ಅವರು ಮೋಕ್ಷಿತಾ, ಧರ್ಮಾ, ಚೈತ್ರಾ ಹಾಗೂ ಶಿಶಿರ್ ಜತೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇದೀಗ ಇವರು ಮನೆಯಿಂದ ಹೊರಬಿದ್ದಿದ್ದಾರೆ ಎನ್ನಲಾಗಿದೆ. ಯಾವುದಕ್ಕೂ ಈ ಬಗ್ಗೆ ಇಂದಿನ ಎಪಿಸೋಡ್ ನೋಡಿದ ಮೇಲೆ ಅಷ್ಟೇ ಕ್ಲಾರಿಟಿ ಸಿಗಬಹುದು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ