ಒಂದೇ ದಿನ ನಾಲ್ಕು ಸಿನಿಮಾಗಳಿಗೆ ಸಹಿ ಹಾಕಿದ ಪ್ರಥಮ್

ಬುಧವಾರ, 22 ಫೆಬ್ರವರಿ 2017 (13:32 IST)
ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಗೆದ್ದ ಬಳಿಕ ಪ್ರಥಮ್ ಅವರಿಗೆ ಒಂದೇ ಸಲ ನಾಲ್ಕು ಚಿತ್ರಗಳಲ್ಲಿ ಅಭಿನಯಿಸುವ ಚಾನ್ಸ್ ಸಿಕ್ಕಿದೆ. ಮೂರು ಚಿತ್ರಗಳಲ್ಲಿ ಹೀರೋ ಆಗಿ ಇನ್ನೊಂದರಲ್ಲಿ ಅತಿಥಿ ಪಾತ್ರ ಪೋಷಿಸಲಿದ್ದಾರೆ ಪ್ರಥಮ್.
 
ಒಂದೇ ದಿನ ನಾಲ್ಕು ಚಿತ್ರಗಳಿಗೆ ಸಹಿಹಾಕಿದ ಖ್ಯಾತಿಯೂ ಪ್ರಥಮ್ ಅವರದು. ನಾಗತಿಹಳ್ಳಿ ಚಂದ್ರಶೇಖರ್, ಕಲಾ ಸಾಮ್ರಾಟ್ ಎಸ್ ನಾರಾಯಣ್, ಸುರೇಶ್ ಕುಮಾರ್ ಹಾಗೂ ಆಪ್ತರೊಬ್ಬರ ಸಿನಿಮಾದಲ್ಲಿ ಬಣ್ಣಹಚ್ಚಲಿದ್ದಾರೆ ಪ್ರಥಮ್. 
 
ಈ ಬೆಳವಣಿಗೆಯಿಂದ ಸಹಜವಾಗಿಯೇ ಪ್ರಥಮ್ ಖುಷಿಯಾಗಿದ್ದಾರೆ. ಇದನ್ನು ಊಹಿಸಿರಲಿಲ್ಲ. ಮುಖ್ಯವಾಗಿ ನಾನು ಹೀರೋ ಆಗುತ್ತೇನೆ ಎಂದೂ ಅಂದುಕೊಂಡಿರಲಿಲ್ಲ ಎಂದಿದ್ದಾರೆ. ಇನ್ನೂ ಇಬ್ಬರು ನಿರ್ಮಾಪಕರು ಪ್ರಥಮ್‌ರೊಂದಿಗೆ ಸಿನಿಮಾ ಮಾಡಲು ಮೂಂದೆ ಬಂದಿದ್ದಾರಂತೆ. ಸಿನಿಮಾದಲ್ಲಿ ಪಡೆದ ಸಂಭಾವನೆಯ ಅರ್ಧ ದುಡ್ಡನ್ನು ಆರ್ಥಿಕವಾಗಿ ಹಿಂದುಳಿದರಿಗೆ ಹಂಚುವುದಾಗಿ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ