ಕರಣ್ ಸಿಂಗ್ ಗ್ರೋವರ್‌ಗೆ ಬಿಪಾಶ ಮೇಡಂ ಪಾಠ

ಗುರುವಾರ, 18 ಡಿಸೆಂಬರ್ 2014 (09:48 IST)
ತನ್ನ ಅರೆ ಬೆತ್ತಲೆ ಹಾಗೂ ಬೋಲ್ಡ್ ನಟನೆಯ ಮೂಲಕ ಭಾರತೀಯಚಿತ್ರರಂಗದಲ್ಲಿ ತನಗೊಂದು ಸ್ಥಾನ ಪಡೆದ ಕೃಷ್ಣ ಸುಂದರಿ ಬಿಪಾಸ ಬಸು. ಕೇವಲ ನಟನೆ ಮಾತ್ರವಲ್ಲದೆ ತನ್ನಪ್ರಣಯ ಕಥೆಗಳ ಮೂಲಕವೂ ಸಹಿತ ಆಕೆ ಮಾಧ್ಯಮಗಳ ಗಾಸಿಪ್ ಪೇಜ್ ನಲ್ಲಿ ರಾರಾಜಿಸಿದ್ದಳು. ಅಲ್ಲದೆ ತಾನು ವರ್ಷಾನುಗಟ್ಟಲೆ ಪ್ರೀತಿಸಿ, ಆತನೊಂದಿಗೆ ಸಹಜೀವನ ನಡೆಸಿ ಕೊನೆಗೆ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಹೊರ ಬಂದಬಿಪಾಸ ಈಗ ಏಕಾಂಗಿ. ಆಕೆಯ ವಯಕ್ತಿಕ ಬದುಕು ಹಾಗಿರಲಿ, ವೃತ್ತಿ ಬದುಕಲ್ಲಿ ಸದಾ ಬ್ಯುಸಿ ಆಗಿರುವ ಬಿಪಾಸ ಈಗ ಅಲೋನ್ ಚಿತ್ರದಲ್ಲಿ ತನ್ನ ಅಭಿನಯ ಸಾಮರ್ಥ್ಯ ತೋರುತ್ತಿದ್ದಾಳೆ.
ಇದು ಪ್ರಣಯ ಹಾರರ್ ಕಥೆಯನ್ನು ಹೊಂದಿದೆ. ಈಕೆಯ ಜೊತೆಗೆ ಮಾಡೆಲ್, ಟೀವಿ ಕಲಾವಿದ  ಕರಣ್ ಸಿಂಗ್ ಗ್ರೋವರ್ ಜೊತೆ ನಟಿಸಿದ್ದಾಳೆ. ಸದ್ಯದಲ್ಲೇ ಬಿಡುಗಡೆ ಆಗಲಿರುವ ಈ ಚಿತ್ರದ ಬಗ್ಗೆ ಸಾಕಷ್ಟು ಆತುರ ಕಾತುರಗಳಿವೆ ಬಿಪ್ಸ್ ಗೆ !
 
ಇದರಲ್ಲಿ  ಹೀರೋ ಆಗಿರುವ ಕರಣ್ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ಬಿಪ್ಸ್ ಆತನಿಗೆ ಮಾಧ್ಯಮಗಳ ಮುಂದೆ ಯಾವರೀತಿ ಪ್ರತಿಕ್ರಿಯಿಸ ಬೇಕು, ಹೇಗೆ ನಡೆದುಕೊಳ್ಳ ಬೇಕು, ಯಾವರೀತಿ ಪ್ರಶ್ನೆಗೆ ಉತ್ತರಿಸ ಬೇಕು ಹೀಗೆ ಹತ್ತು ಹಲವಾರು ರೀತಿಯಲ್ಲಿ ಸಿದ್ಧತೆ ಮಾಡುತ್ತಿದ್ದಾಳಂತೆ  . ಈ ಸಂಗತಿ ಕೇಳಿದಾಗಿನಿಂದ ಆಕೆಯ ಪ್ರೇಮಿ ಮತ್ತು ಪ್ರಾಯಶಃ ಭಾವಿ ಗಂಡ   ಹರ್ಮನ್ ಬವೇಜಾಗೆ ನಿದ್ದೆ ಬರ್ತಾ ಇಲ್ಲವಂತೆ.. 

ವೆಬ್ದುನಿಯಾವನ್ನು ಓದಿ