ಬೆಂಗಳೂರು: ಚಿನ್ನದ ನಾಡಲ್ಲಿ ರಕ್ತದೋಕುಳಿ ಹರಿಯುತ್ತಿದೆಯಂತೆ! ಇದನ್ನು ಕೇಳಿ ಗಾಬರಿಯಾಗಬೇಕಿಲ್ಲ.ಇಂತಹದ್ದೊಂದು ಟ್ಯಾಗ್ ಲೈನ್ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ಆರ್ಯ ಎಂ. ಮಹೇಶ್.
ಕೋಲಾರ 1990 ಎಂಬುದು ಚಿತ್ರದ ಹೆಸರು. ಲೂಸ್ ಮಾದ ಯೋಗಿ ಈ ಚಿತ್ರದ ನಾಯಕ. ಆರ್. ಲಕ್ಷ್ಮೀ ನಾರಾಯಣ ಗೌಡ ಮತ್ತು ರಮೇಶ್ ಆರ್. ಚಿತ್ರಕ್ಕೆ ದುಡ್ಡು ಹಾಕುತ್ತಿದ್ದಾರೆ. ಇದೊಂದು ಲಾಂಗು ಮಚ್ಚಿನ ಕತೆ ಎಂದು ಬೇರೆ ಹೇಳಬೇಕಾಗಿಲ್ಲ. ನೈಜ ಕತೆಯನ್ನು ಮೂಲವಾಗಿಟ್ಟುಕೊಂಡು ಬರೆದ ಕತೆಯಂತೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದರ ಧ್ವನಿ ಸುರುಳಿ ಬಿಡುಗಡೆ ಮಾಡಲಿದ್ದು, ಎಚ್. ಡಿ. ಕುಮಾರಸ್ವಾಮಿ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ. ಜಾನ್ ಜಾನಿ ಜನಾರ್ಧನ್ ನಂತಹ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ನಂತರ ಯೋಗಿ ಮಚ್ಚು ಹಿಡಿಯುವ ಕತೆಯನ್ನು ಅಪ್ಪಿಕೊಂಡಿದ್ದಾರೆ. ಯೋಗಿಗೆ ಇತ್ತೀಚೆಗೆ ಯಾಕೋ ಅದೃಷ್ಟ ಕೈ ಹಿಡಿಯುತ್ತಿಲ್ಲ. ಈ ಚಿತ್ರದ ಮೂಲಕವಾದರೂ ಹಿಂದಿನ ಹಳಿಗೆ ಬರುತ್ತಾರೋ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ