ಬಾಲಿವುಡ್ ನಟ ರಣಬೀರ್ ಕಪೂರ್ – ಆಲಿಯಾ ಭಟ್ ರೋಮ್ಯಾನ್ಸ್
ಶುಕ್ರವಾರ, 11 ಸೆಪ್ಟಂಬರ್ 2020 (17:34 IST)
ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರೋಮ್ಯಾನ್ಸ್ ಶುರುವಿಟ್ಟುಕೊಂಡಿದ್ದಾರೆ.
ಹೌದು ನೀವು ಓದುತ್ತಿರುವ ಸುದ್ದಿ ನಿಜವಾದರೂ ಇವರು ರೋಮ್ಯಾನ್ಸ್ ಮಾಡುತ್ತಿರುವುದು ಕೇವಲ ಸಿನಿಮಾದಲ್ಲಿ ಮಾತ್ರ.
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಬ್ರಹ್ಮಾಸ್ತ್ರ ಶೂಟಿಂಗ್ ಮತ್ತೆ ಆರಂಭಿಸಲಾಗಿದೆ.
ಐದಾರು ತಿಂಗಳ ಲಾಕ್ ಡೌನ್ ಬಳಿಕ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಅಂತಿಮ ಹಂತದ ಚಿತ್ರೀಕರಣದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸೇರ್ಪಡೆಗೊಂಡಿದ್ದಾರೆ.
ಬ್ರಹ್ಮಾಸ್ತ್ರ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಡಿಂಪಲ್ ಕಪಾಡಿಯಾ, ನಾಗಾರ್ಜುನ ಅಕ್ಕಿನೇನಿ ಮತ್ತು ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.