ಲಾಸ್‌ ಏಂಜಲೀಸ್‌ನ ಕಾಳ್ಗಿಜ್ಜಿನಿಂದ ಜಸ್ಟ್ ಎಸ್ಕೇಪ್‌ ಆದ ಬಾಲಿವುಡ್ ನಟಿ ನೋರಾ ಫತೇಹಿ

Sampriya

ಗುರುವಾರ, 9 ಜನವರಿ 2025 (19:28 IST)
Photo Courtesy X
ಮುಂಬೈ:  ಸಾಮಾಜಿಕ ಜಾಲತಾಣದಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಭೀಕರ ಕಾಳ್ಗಿಚ್ಚಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಧರೆಯೇ ಹೊತ್ತಿ ಉರಿಯುವಂತಹ ವಾತಾವರಣ ನಿರ್ಮಾಣವಾಗಿದೆ. ಇದೀಗ ಈ ಪ್ರದೇಶದಲ್ಲಿದ್ದ ಬಾಲಿವುಡ್‌ ಸ್ಟಾರ್ ನಟಿಯರಾದ ನೋರಾ ಫತೇಹಿ ಹಾಗೂ ಪ್ರಿಯಾಂಕಾ ಚೋಪ್ರಾ ಬೆಚ್ಚಿ ಬಿದ್ದಿದ್ದಾರೆ.

ಈ ಬಗ್ಗೆ ನಟಿ ನೋರಾ ಫತೇಹಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.  ನಾನು ಈ ರೀತಿಯಲ್ಲಿ ಏನನ್ನೂ ನೋಡಿಲ್ಲ. ಇಲ್ಲಿನ ಭೀಕರತೆ ಕಂಡು  ಐದು ನಿಮಿಷಗಳ ಹಿಂದೆ ನಾವು ಸ್ಥಳಾಂತರಿಸುವ ಆದೇಶವನ್ನು ಪಡೆದುಕೊಂಡಿದ್ದೇವೆ. ಹಾಗಾಗಿ ನಾನು ನನ್ನ ಎಲ್ಲಾ ವಸ್ತುಗಳನ್ನು ತ್ವರಿತವಾಗಿ ಪ್ಯಾಕ್ ಮಾಡಿದ್ದೇನೆ ಮತ್ತು ನಾನು ಈ ಪ್ರದೇಶದಿಂದ ಸ್ಥಳಾಂತರಿಸುತ್ತಿದ್ದೇನೆ. ನಾನು ವಿಮಾನ ನಿಲ್ದಾಣದ ಬಳಿ ಹೋಗಿ ಅಲ್ಲಿ ತಣ್ಣಗಾಗುತ್ತೇನೆ ಏಕೆಂದರೆ ನನಗೆ ಇಂದು ವಿಮಾನವಿದೆ. ನಾನು ಅದನ್ನು ಹಿಡಿಯಬಹುದೆಂದು ನಾನು ಭಾವಿಸುತ್ತೇನೆ. ಜನರು ಸುರಕ್ಷಿತವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಲಾಸ್ ಏಂಜಲೀಸ್‌ಗೆ ಭೀಕರ ಕಾಡ್ಗಿಚ್ಚು ಆವರಿಸಿದ್ದು, 1,000ಕ್ಕೂ ಹೆಚ್ಚು ರಚನೆಗಳು ನಾಶವಾಗಿವೆ. 1,30,000 ನಿವಾಸಗಳನ್ನು ಸ್ಥಳಾಂತರಿಸಲಾಗಿದೆ.

ಮಂಗಳವಾರ ಪೆಸಿಫಿಕ್ ಪಾಲಿಸೇಡ್ಸ್‌ನಲ್ಲಿ ಆರಂಭವಾದ ವಿನಾಶಕಾರಿ ಕಾಡ್ಗಿಚ್ಚು 15,000 ಎಕರೆ ಪ್ರದೇಶವನ್ನು ಆವರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ