ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಮೌನವಾಗಿರುವ ವಿಶೇಷವಾಗಿ ಬಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಟೀಕಿಸಿದ್ದಾರೆ.
ಅವರು ಕ್ಯಾಮೆರಾಗಳ ಎದುರು ಮಾತ್ರ ಅಭಿನಯಿಸುತ್ತಾರೆ. ಆದರೆ ನಿಜವಾಗಿ ಮುಖ್ಯವಾದಾ ಘಟನೆ ಬಗ್ಗೆ ಮಾತನಾಡುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.
ದೇಶವನ್ನು ರಕ್ಷಿಸುವ ನಮ್ಮ ವೀರ ಯೋಧರು ನಿಜವಾದ ಹೀರೋಗಳು ಎಂದು ಅವರು ಹೇಳಿದರು.
ಆಪರೇಷನ್ ಸಿಂಧೂರ್‌ಗೆ ಬಾಲಿವುಡ್ ಸೆಲೆಬ್ರೀಟಿಗಳು ನೀಡದ ಬೆಂಬಲ ಬಗ್ಗೆ ಮತ್ತು ಭಾರತೀಯ ಸಶಸ್ತ್ರ ಪಡೆಗಳನ್ನು ಸಾರ್ವಜನಿಕವಾಗಿ ಬೆಂಬಲಿಸಲು ಅದರ ಸ್ಪಷ್ಟ ಹಿಂಜರಿಕೆಯ ಬಗ್ಗೆ ನೆಟಿಜನ್‌ಗಳ ಒಂದು ವಿಭಾಗವು ನಿರಾಶೆಯನ್ನು ವ್ಯಕ್ತಪಡಿಸಿದೆ.
ಆಪರೇಷನ್ ಸಿಂಧೂರ್‌ನ ಯಶಸ್ಸಿನ ಗೌರವಾರ್ಥ ರಾಷ್ಟ್ರವ್ಯಾಪಿ ಅಭಿಯಾನದ ಭಾಗವಾಗಿ, ಶುಕ್ರವಾರ ವಿಜಯವಾಡದಲ್ಲಿ ಭವ್ಯವಾದ ತಿರಂಗಾ ರ್ಯಾಲಿಯನ್ನು ನಡೆಸಲಾಯಿತು.
ಈ ಕಾರ್ಯಕ್ರಮವು ಭಾರತದ ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸಿತು. ಆಂಧ್ರಪ್ರದೇಶ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಬಿಜೆಪಿ ರಾಜ್ಯಾಧ್ಯಕ್ಷೆ ಮತ್ತು ಸಂಸದೆ ದಗ್ಗುಬಾಟಿ ಪುರಂದೇಶ್ವರಿ ಸೇರಿದಂತೆ ಸಾವಿರಾರು ನಾಗರಿಕರು ರಾಷ್ಟ್ರಧ್ವಜವನ್ನು ಬೀಸುವ ಮೂಲಕ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದರು.
ಮೆರವಣಿಗೆಯು ವಿಸ್ತೃತ ರಾಷ್ಟ್ರಧ್ವಜವನ್ನು ಹಿಡಿದು ದೇಶಭಕ್ತಿಯ ಘೋಷಣೆಗಳನ್ನು ಕೂಗುವ ಮೂಲಕ ನಗರದ ಪ್ರಮುಖ ಭಾಗಗಳಲ್ಲಿ ಸಾಗಿತು.