Shashi Tharoor: ಮೋದಿಯನ್ನು ಹೊಗಳಿದ ಕೈ ಸಂಸದ ಶಶಿ ತರೂರ್ ಗೆ ಸಿಕ್ತು ಭರ್ಜರಿ ಬಹುಮಾನ

Krishnaveni K

ಶುಕ್ರವಾರ, 16 ಮೇ 2025 (16:11 IST)
ನವದೆಹಲಿ: ಆಪರೇಷನ್ ಸಿಂಧೂರ್ ವಿಚಾರದಲ್ಲಿ ಮೋದಿ ಸರ್ಕಾರವನ್ನು ಹೊಗಳಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ಈಗ ಮೋದಿ ಸರ್ಕಾರದಿಂದ ಭರ್ಜರಿ ಬಹುಮಾನವೇ ಸಿಗುತ್ತಿದೆ.

ಆಪರೇಷನ್ ಸಿಂಧೂರ್ ವಿಚಾರದಲ್ಲಿ ಮೋದಿ ನಡೆ ಬಗ್ಗೆ ಶಶಿ ತರೂರ್ ಎಲ್ಲೆಡೆ ಸಮರ್ಥಿಸುತ್ತಾ ಬಂದಿದ್ದಾರೆ. ಮೋದಿ ಸರ್ಕಾರವನ್ನು ಹೊಗಳುತ್ತಿದ್ದಾರೆ. ಕದನ ವಿರಾಮವನ್ನೂ ಸಮರ್ಥಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ನಾಯಕರೊಳಗೇ ಅಸಮಾಧಾನ ತಂದಿದೆ.

ಶಶಿ ತರೂರ್ ಲಕ್ಷ್ಮಣ ರೇಖೆ ದಾಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಈ ನಡುವೆ ಶಶಿ ತರೂರ್ ಗೆ ಕೇಂದ್ರ ಸರ್ಕಾರ ಒಳ್ಳೆಯ ಸ್ಥಾನವನ್ನೇ ನೀಡಲು ಮುಂದಾಗಿದೆ.

ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನದ ಕುಮ್ಮಕ್ಕಿನ ಬಗ್ಗೆ ಜಾಗತಿಕ ನಾಯಕರ ಗಮನ ಸೆಳೆಯಲು ಮೋದಿ ಸರ್ಕಾರ ಸರ್ವಪಕ್ಷಗಳ ಸಂಸದರ ನಿಯೋಗವೊಂದನ್ನು ನೇಮಿಸುತ್ತಿದೆ. ಈ ನಿಯೋಗದಲ್ಲಿ ಶಶಿ ತರೂರ್ ಗೆ ಸ್ಥಾನ ನೀಡಲು ಮೋದಿ ಸರ್ಕಾರ ಮುಂದಾಗಿದೆ. ಈ ಮೂಲಕ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಶಶಿ ತರೂರ್ ಗೆ ಬಿಜೆಪಿಯಲ್ಲಿ ಉತ್ತಮ ಸ್ಥಾನ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ