ಕೊನೆಗೂ ಅಂತ್ಯವಾಯಿತು ಹೃತಿಕ್ ರೋಷನ್ ಮತ್ತು ಸುಸಾನ್ ಖಾನ್ ದಾಂಪತ್ಯ ಜೀವನ

ಶನಿವಾರ, 1 ನವೆಂಬರ್ 2014 (17:20 IST)
ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ಸುಸಾನ್ ಖಾನ್ ದಂಪತಿಯರ ದಾಂಪತ್ಯ ಮುರಿದು ಬಿದ್ದಿದೆ. ತಮಗೆ ವಿಚ್ಛೇದನ ಬೇಕು ಎಂದು ಈ ದಂಪತಿಗಳ ಬಾಂದ್ರಾ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ಸ್ವೀಕರಿಸಿದ ಕೋರ್ಟ್ ಇವರಿಗೆ ವಿಚ್ಛೇದವನ್ನು ನೀಡಿದೆ.
 
ಆದಾಗ್ಯೂ, ವಿಚ್ಛೇದನದ ನಂತರ ಮಕ್ಕಳು ಯಾರ ಜತೆ ಇರುತ್ತಾರೆ? ಎಂಬುದರ ಬಗ್ಗೆ ಇಲ್ಲಿಯವರೆಗೆ ತೀರ್ಮಾನ ಆಗಿಲ್ಲ. ಈ ಬಗ್ಗೆ ಕೆಲವೇ ದಿನಗಳಲ್ಲಿ ಕೋರ್ಟ್ ತೀರ್ಮಾನ ಕೈಗೊಳ್ಳಲಿದೆ.  ಹೃತಿಕ್ -ಸುಸಾನ್ ದಂಪತಿಗಳಿದೆ ಹ್ರೆಹಾನ್ ಮತ್ತು ಹ್ರಿದಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.
 
ಕಳೆದ ವರ್ಷ ಡಿಸೆಂಬರ್ ನಲ್ಲಿ ಹೃತಿಕ್ -ಸುಸಾನ್ ದಂಪತಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಅಕ್ಟೋಬರ್ 31ರಂದು ನಡೆದಿದ್ದು, ಇದಕ್ಕೆ ಹೃತಿಕ್ ಹಾಜರಾಗಿಲ್ಲ. ಆದರೆ ಕೋರ್ಟ್ ಇವರಿಬ್ಬರಿಗೆ ವಿಚ್ಛೇದನ ನೀಡಿ ತೀರ್ಪು ಪ್ರಕಟಿಸಿದೆ.
 

ವೆಬ್ದುನಿಯಾವನ್ನು ಓದಿ