ಈ ನಿರ್ದೇಶಕನನ್ನು ನಾನು ನಂಬುವುದಿಲ್ಲ ಎಂದ ಬೋನಿ ಕಪೂರ್

ಶುಕ್ರವಾರ, 12 ಫೆಬ್ರವರಿ 2021 (13:31 IST)
ಹೈದರಾಬಾದ್ : ಬೋನಿ ಕಪೂರ್ ಚಿತ್ರರಂಗದ ಹಿರಿಯ ನಿರ್ಮಾಪಕರಲ್ಲಿ ಒಬ್ಬರು. ಪ್ರಸ್ತುತ ಅವರು ಅಜಯ್ ದೇವಗನ್ ಅವರ ಜೊತೆ ಮೈದಾನ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರ ಈ ವರ್ಷ ಅಕ್ಟೋಬರ್ 13ರಂದು ಬಿಡುಗಡೆಯಾಗಲಿದೆ.

ಆದರೆ ಈ ಚಿತ್ರ ಬಿಡುಗಡೆಯ ವಿಚಾರದಲ್ಲಿ ಬೋನಿ ಕಪೂರ್ ನಿರಾಶೆಗೊಂಡಿದ್ದಾರೆ. ಆರ್ ಆರ್ ಆರ್ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಂದೇ ನಿಗದಿಪಡಿಸಿದಕ್ಕೆ ನಿರ್ದೇಶಕ ರಾಜಮೌಳಿ ಅವರ ಬಗ್ಗೆ ಬೋನಿ ಕಪೂರ್ ಬೇಸರಗೊಂಡಿದ್ದರು. ಆದರೆ ಆರ್ ಆರ್ ಆರ್ ಚಿತ್ರದ ಬಿಡುಗಡೆಯ ದಿನಾಂಕ ನಿಗದಿಪಡಿಸುವುದು ರಾಜಮೌಳಿಯ ಕೈಯಲ್ಲಿರಲಿಲ್ಲ . ಅದು ನಿರ್ಮಾಪಕ ನಿರ್ಧಾರ ಎಂದು ಹೇಳಲಾಗಿದೆ. ಆದರೆ ಬೋನಿ ಕಪೂರ್ ಮಾತ್ರ ನಾನು ರಾಜಮೌಳಿಯನ್ನು ನಂಬುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ