ಐ ಲವ್ ಯೂ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗಿದೆ. ತೆಲುಗಿನಲ್ಲಿ ಹೇಳಿ ಕೇಳಿ ಬ್ರಹ್ಮಾನಂದಂ ಪ್ರಸಿದ್ಧರು. ಕನ್ನಡ ಪ್ರೇಕ್ಷಕರಿಗೂ ಅವರು ಪರಿಚಿತರೇ. ಹೀಗಿರೋದರಿಂದಲೇ ಬ್ರಹ್ಮಾನಂದಂ ಅವರಿಗೊಂದು ಪಾತ್ರ ಸೃಷ್ಟಿಸಿದ್ದಾರೆ. ಅದು ಎಲ್ಲರೂ ಅಂದುಕೊಂಳ್ಳುವಂತೆಯೇ ಕಾಮಿಡಿ ಪಾತ್ರ. ಆದರೆ, ಯಾರೂ ಊಹಿಸಲಾಗದಂಥಾ ಮಜಲುಗಳು ಅದಕ್ಕಿದೆಯಂತೆ.
ಬ್ರಹ್ಮಾನಂದಂ ಇಲ್ಲಿ ನಾಯಕ ಮತ್ತು ನಾಯಕಿಯ ಸಂಬಂಧ ಕುದುರಿಸೋ ಹಾಸ್ಯಮಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಆ ಪಾತ್ರ ಇಡೀ ಕಥೆಯ ಬಹುಮುಖ್ಯ ಬಿಂದುವಿನಂಥಾದ್ದು. ಚಿತ್ರದ ಪ್ರಮುಖ ಘಟ್ಟಗಳಲ್ಲಿ ಈ ಪಾತ್ರ ನಿರ್ಣಾಯಕವಾಗಿ ನಡೆದುಕೊಳ್ಳುತ್ತೆ ಮತ್ತು ಚಿತ್ರದುದ್ದಕ್ಕೂ ಅದರ ಹಾಜರಿ ಇರುತ್ತದೆ. ಈ ಲವ್ ಯೂ ಚಿತ್ರದ ಮುಖ್ಯ ಸೆಳೆತಗಳಲ್ಲಿ ಬ್ರಹ್ಮಾನಂದಂ ನಟಿಸಿರೋ ಪಾತ್ರವೂ ಸೇರಿಕೊಂಡಿದೆ.