2019ರ ಕ್ಯಾಲೆಂಡರ್‌ ವರ್ಷದ ಚಲನಚಿತ್ರ ಪ್ರಶಸ್ತಿ: ನಟ ಸುದೀಪ್‌, ಅನುಪಮಾ ಗೌಡಗೆ ಪ್ರಶಸ್ತಿ

Sampriya

ಬುಧವಾರ, 22 ಜನವರಿ 2025 (17:05 IST)
Photo Courtesy X
ಬೆಂಗಳೂರು: 2019ರ ಕ್ಯಾಲೆಂಡರ್‌ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು ಘೋಷಣೆ ಮಾಡಿದೆ.

ಅದರಲ್ಲಿ ಕಿಚ್ಚ ಸುದೀಪ್‌ ಮತ್ತು ಅನುಪಮಾ ಗೌಡ ಅವರು ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆ:

ಪೈಲ್ವಾನ್‌ ಚಿತ್ರದ ಅಭಿನಯಕ್ಕಾಗಿ ಸುದೀಪ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.


ತ್ರಯಂಬಕಂ ಸಿನಿಮಾದ ಅಭಿನಯಕ್ಕಾಗಿ ಅನುಪಮಾ ಗೌಡಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಚಿತ್ರ : ಮೋಹನದಾಸ
ಪಿ. ಶೇಷಾದ್ರಿ ನಿರ್ದೇಶನದ ಚಿತ್ರ

ದ್ವಿತಿಯ ಅತ್ಯುತ್ತಮ ಚಿತ್ರ : 'ಲವ್‌ ಮಾಕ್ಟೈಲ್‌' ಸಿನಿಮಾ
ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ

ತೃತಿಯ ಅತ್ಯುತ್ತಮ ಚಿತ್ರ : ಅರ್ಘ್ಯೂಂ
ವೈ ಶ್ರೀನಿವಾಸ್ ನಿರ್ದೇಶನಕ

ಅತ್ಯುತ್ತಮ ಪೋಷಕ ನಟ:
ತಬಲಾ ನಾಣಿ (ಕಮೆಸ್ಟ್ರಿ ಆಫ್ ಕರಿಯಪ್ಪ)

ಅತ್ಯುತ್ತಮ ಪೋಷಕ ನಟಿ:
ಅನುಷಾ ಕೃಷ್ಣ (ಬ್ರಾಹ್ಮಿಂ)

ಅತ್ಯುತ್ತಮ ಕತೆ: ಜಯಂತ್‌ ಕಾಯ್ಕಿಣಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ